ನ್ಯೂಸ್ ನಾಟೌಟ್ : ನಾಯಿ ಮನುಷ್ಯನನ್ನು ಅತಿ ಬೇಗ ಹಚ್ಚಿಕೊಳ್ಳುತ್ತವೆ. ಸ್ಪಲ್ಪ ಪ್ರೀತಿ ತೋರಿದರೂ ಸಾಕು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತದೆ. ಅದು ನಿಜ ಎಂಬುದಕ್ಕೆ ಇಲ್ಲೊಂದು ವೈರಲ್ ಫೋಟೋ ಸಾಬೀತುಪಡಿಸಿದೆ.
ಮೂಕಪ್ರಾಣಿಗಳ ನಿಷ್ಕಲ್ಮಶ ಪ್ರೀತಿ ಜೀವನವನ್ನು ಹೆಚ್ಚು ವರ್ಣಮಯವಾಗಿಸುತ್ತದೆ.ಮನುಷ್ಯನ ಭಾವನೆಗಳಿಗೆ ಅದು ಸ್ಪಂದಿಸುತ್ತದೆ.ಮನುಷ್ಯ ಬೇಜಾರಾದಾಗ ಅದು ಕೂಡ ಬೇಜಾರು ಮಾಡಿಕೊಂಡಿರುತ್ತದೆ. ಮನುಷ್ಯ ಖುಷಿಯಲ್ಲಿದ್ದಾಗ ಅದು ಕೂಡ ಖುಷಿಯನ್ನು ಹಂಚಿಕೊಳ್ಳುತ್ತದೆ. ಅದಕ್ಕೆ ಈ ಫೋಟೋನೇ ಸಾಕ್ಷಿ. ವಧು ಸಾಕಿದ್ದ ನಾಯಿಯೊಂದು ವಧು ಗಂಡನ ಮನೆಗೆ ಹೋಗುವ ವೇಳೆ ತಡೆದು ನಿಲ್ಲಿಸಿದ ವಿಡಿಯೋವೊಂದು ಬಾರಿ ವೈರಲ್ ಆಗಿದೆ. ಇದನ್ನು @i_love_yau_1430 ಬಳಕೆದಾರರು Instagramನಲ್ಲಿ ಈ ಅದ್ಭುತ ವೀಡಿಯೋವನ್ನು ಹಂಚಿಕೊಂಡಿದ್ದು, ಎಲ್ಲರೂ ಇದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ವಧು ತನ್ನ ತವರುಮನೆಗೆ ವಿದಾಯ ಹೇಳಿ ತೆರಳುವ ಸಮಾರಂಭದಲ್ಲಿ ತನ್ನ ನಾಯಿಯನ್ನು ಮುದ್ದಿಸುತ್ತಿರುವುದನ್ನು ಕಾಣಬಹುದು. ಅದಕ್ಕೆ ನಾಯಿ ಕೂಡ ಸ್ಪಂದಿಸುತ್ತದೆ. ಈ ದೃಶ್ಯ ಅಲ್ಲಿ ನೆರೆದವರ ಮನಸ್ಸನ್ನೇ ಭಾರವನ್ನಾಗಿಸಿತು. ಭಾವನಾತ್ಮಕ ಮತ್ತು ಅನೇಕ ಜನರ ಹೃದಯವನ್ನು ಮುಟ್ಟಿದ ಸಂಗತಿಯೆಂದರೆ ನಾಯಿಯು ವಧುವಿನ ಹತ್ತಿರವೇ ಇರುತ್ತದೆ. ಮತ್ತು ಅವಳನ್ನು ಹೋಗಲು ಬಿಡಲು ನಿರಾಕರಿಸುತ್ತದೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.