ನ್ಯೂಸ್ ನಾಟೌಟ್: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರದಿಂದ ಐದು ಸಹಕಾರಿ ಬ್ಯಾಂಕ್ಗಳ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿದೆ. ಆರ್ಬಿಐನ ಪೂರ್ವಾನುಮತಿಯಿಲ್ಲದೆ ಸಾಲ ನೀಡುವುದು, ಯಾವುದೇ ಹೂಡಿಕೆ ಮಾಡಲು, ಯಾವುದೇ ಹೊಣೆಗಾರಿಕೆಯನ್ನು ಹೊಂದಲು ಅಥವಾ ಆಸ್ತಿಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ಈ ನಿರ್ಬಂಧ ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ. ಬ್ಯಾಂಕ್ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಆದೇಶ ಹೊರಡಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿಂಷಾ ಸಹಕಾರ ಬ್ಯಾಂಕ್ ನಿಯಮಿತ ಮೇಲೆ ನಿರ್ಬಂಧ ವಿದಿಸಿದೆ. ಈ ಬ್ಯಾಂಕ್ನಲ್ಲಿ ಹಣ ಹೂಡಿಕೆ ಮಾಡಿರುವ ಗ್ರಾಹಕರು ಮುಂದಿನ ಆರು ತಿಂಗಳ ವರೆಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರ್ಬಿಐ ತಿಳಿಸಿದೆ. ಹಾಗೆಯೇ HCBL ಸಹಕಾರ ಬ್ಯಾಂಕ್, ಲಕ್ನೋ (ಉತ್ತರ ಪ್ರದೇಶ) ಗ್ರಾಹಕರು, ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್ ಮರ್ಯಾಡಿತ್, ಔರಂಗಾಬಾದ್ (ಮಹಾರಾಷ್ಟ್ರ) ಈ ಮೂರು ಸಾಲದಾತರ ಪ್ರಸ್ತುತ ಲಿಕ್ವಿಡಿಟಿ ಸ್ಥಿತಿಯ ಕಾರಣದಿಂದ ತಮ್ಮ ಖಾತೆಗಳಿಂದ ಹಣ ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್, ಉರವಕೊಂಡ, (ಅನಂತಪುರ ಜಿಲ್ಲೆ, ಆಂಧ್ರ ಪ್ರದೇಶ) ಮತ್ತು ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್, ಅಕ್ಲುಜ್ (ಮಹಾರಾಷ್ಟ್ರ) ಗ್ರಾಹಕರು 5,000 ರೂ. ವರೆಗೆ ಹಿಂಪಡೆಯಬಹುದು.
ಎಲ್ಲಾ ಐದು ಸಹಕಾರಿ ಬ್ಯಾಂಕ್ಗಳ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆರ್ಬಿಐ ಹೇಳಿದೆ.