ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಮನೆಗೆ, ಕಚೇರಿ, ಚಿನ್ನದಂಗಡಿ, ಬ್ಯಾಂಕ್, ದೇವಾಲಗಳಿಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣ ಕೇಳಿದ್ದೇವೆ. ಆದರೆ ಇಲ್ಲೊಂದು ಒಂದು ಖದೀಮರ ತಂಡ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ರೈಲ್ವೇ ಹಳಿಯನ್ನೇ ಕದ್ದು ಗುಜಿರಿಗೆ ಹಾಕಿದ್ದಾರೆ. ಏನಿದು ಪ್ರಕರಣ? ಈ ಸ್ಟೋರಿ ಓದಿ…
ಈ ಘಟನೆ ನಡೆದದ್ದು ಬಿಹಾರದಲ್ಲಿ. ಇಲ್ಲಿನ ಸಮಸ್ತಿಪುರ್ ರೈಲ್ವೆ ವಿಭಾಗದಲ್ಲಿ ಎರಡು ಕಿ.ಮೀ. ಉದ್ದದ ರೈಲ್ವೆ ಹಳಿಯನ್ನೇ ಕದ್ದ ಕಳ್ಳರು ಆರ್ಪಿಎಫ್ ಸಿಬ್ಬಂದಿ ಸಹಾಯದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ರೈಲಿನ ಹಳೇಯ ಸಾಮಗ್ರಿಗಳನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾರೆ. ಘಟನೆ ಸಂಬಂಧ ರೈಲ್ವೆ ರಕ್ಷಣಾ ಪಡೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿಝಂಜರ್ಪುರ ಆರ್ಪಿಎಫ್ ಹೊರ ಠಾಣೆ ಉಸ್ತುವಾರಿ ಶ್ರೀನಿವಾಸ್ ಮತ್ತು ಮಧುಬನಿಯ ರೈಲ್ವೇ ವಿಭಾಗದ ಜಮಾದಾರ್ ಮುಖೇಶ್ ಕುಮಾರ್ ಸಿಂಗ್ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ಪ್ರಕರಣದ ತನಿಖೆಗೆ ಇಲಾಖಾ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ ಎಂದು ಸಮಸ್ತಿಪುರ್ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ್ ತಿಳಿಸಿದ್ದಾರೆ.