ನ್ಯೂಸ್ನಾಟೌಟ್: ಮಂಗಳೂರು ಪ್ರವಾಸದಲ್ಲಿದ್ದ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಪ್ರವಾಸದ ವೇಳೆ ಭದ್ರತಾ ವೈಫಲ್ಯವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಯಾವುದೇ ರೀತಿಯ ಭದ್ರತಾ ವೈಫಲ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ವಾಹನ ಸಂಚರಿಸುವಾಗ ಝೀರೋ ಟ್ರಾಫಿಕ್ ಮಾಡಲಾಗಿತ್ತು. ಆಗ ನಂತೂರಿನಲ್ಲಿ ಬೈಕ್ನಲ್ಲಿ ಮೂವರು ಯುವಕರು ನುಗ್ಗಿದ್ದರು. ಆದರೆ ಘಟನೆ ನಡೆದಾಗ ಪ್ರಮೋದ್ ಸಾವಂತ್ ಅವರ ಕಾರು ಪಂಪ್ವೆಲ್ ಬಳಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಬೈಕ್ ಸಂಚರಿಸುವ ದೃಶ್ಯ ಸೆರೆಯಾಗಿದ್ದು, ಆದರೆ ಬೈಕ್ಗೆ ನಂಬರ್ ಪ್ಲೇಟ್ ಇರಲಿಲ್ಲ. ಬೈಕ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.