ನ್ಯೂಸ್ ನಾಟೌಟ್: ಗಂಡನನ್ನು ಬಿಟ್ಟು ಪ್ರಿಯಕರನ ನಂಬಿ ಬಂದ ಪ್ರಿಯತಮೆ. ಈಕೆಗೆ ಕೈ ಕೊಟ್ಟ ಪ್ರಿಯಕರ. ಐದು ವರ್ಷದ ಇಬ್ಬರ ನಡುವೆ ಪ್ರೇಮ ಬೆಳೆದಿತ್ತು. ಮದುವೆಯಾದ ಗಂಡನನ್ನು ಬಿಟ್ಟು ಬಂದಿರುವ ಯುವತಿ ಅವನೇ ನನಗೆ ಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಳು.
ಐದು ವರ್ಷದ ಹಿಂದೆ ಅವನಿಗೆ 18 ವರ್ಷ,ಈಕೆಗೆ 19 ವರ್ಷ. ಇದೀಗ ಪೂಜಾಳಿಗೆ ೨೪ ವರ್ಷ.ಕಿರಣ್ ಗೆ ೨೦ ವರ್ಷ. ಈ ಘಟನೆ ನಡೆದದ್ದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಮಲ್ಲೆ ಗ್ರಾಮದಲ್ಲಿ .ಇದೇ ಗ್ರಾಮದ ಕಿರಣ್ ಹಾಗೂ ಪೂಜಾ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯವರು ಪೂಜಾಳಿಗೆ ಬೇರೊಬ್ಬನ ಜೊತೆ ಮದುವೆ ಮಾಡಿದ್ದಾರೆ. ಪೂಜಾಗೆ ಮದುವೆ ಆಗಿದ್ದರೂ ಕಿರಣ್ ಜೊತೆಗಿನ ಸಂಬಂಧ ಮುಂದುವರಿದಿತ್ತು. ಪ್ರೀತಿಸುತ್ತಿದ್ದ ಕಿರಣ್, ನಿನ್ನ ಗಂಡನಿಗೆ ಡೈವೋರ್ಸ್ ಕೊಟ್ಟು ಬಾ ಆಮೇಲೆ ಬದುವೆಯಾಗೋಣ ಎಂದಿದ್ದಾನೆ. ಪೂಜಾ ಸಹ ಮಾತು ನಂಬಿ ಪ್ರಿಯಕರನ ಬಳಿ ಬಂದಿದ್ದಾಳೆ. ಆದ್ರೆ ಈಗ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಪ್ರಿಯಕರ ಕಿರಣ್ ಕೈ ಕೊಟ್ಟು ಪರಾರಿಯಾಗಿದ್ದಾನೆ. ಕಿರಣ್ ಮನೆ ಮುಂದೆ ಕುಳಿತಿದ್ದ ಪೂಜಾ ನ್ಯಾಯ ಕೊಡಿಸೋವರೆಗೂ ಇಲ್ಲಿಂದ ಹೋಗಲ್ಲ ಅಂತ ಕುಳಿತಿದ್ದಳು.
ಇನ್ನು ಮನೆಯವರ ಬಲವಂತಕ್ಕೆ ಮದುವೆಯಾದ ಪೂಜಾ ಗಂಡನಿಗೆ ವಿಚ್ಛೇದನ ನೀಡಿದ್ದಾಳೆ. ಇತ್ತ ಬೆಟ್ಟದಂತೆ ಗಟ್ಟಿಯಾಗಿ ನಂಬಿಕೊಂಡಿದ್ದ ಪೂಜಾಳ ಪ್ರಿಯಕರ ಮನೆಯವರು ಒಪ್ಪುತ್ತಿಲ್ಲ ಎಂದು ಪರಾರಿಯಾಗಿದ್ದಾನೆ. ಕೊನೆಗೂ ಕಿರಣ್ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಳೆದ ಐದು ವರ್ಷದಿಂದ ನನ್ನ ಮೇಲೆ ಅತ್ಯಚಾರ ನಡೆದಿದೆ ಎಂದು ಪೂಜಾ ಆರೋಪಿಸಿದ್ದಾಳೆ.
ದೂರು ದಾಖಲಿಸಿಕೊಂಡ ಪೊಲೀಸರು ಕಿರಣ್ ನನ್ನು ಬಂಧಿಸಿದ್ದಾರೆ. ಆದರೆ ಕಿರಣ್ ಮದುವೆ ವಯಸ್ಸು ಆಗದ ಹಿನ್ನಲೆ ಬಾಲಮಂದಿರಕ್ಕೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ. ನ್ಯಾಯ ಸಿಗೋವರೆಗೂ ಹೋರಾಟ ಮಾಡುತ್ತೇನೆ ಎಂದು ಪೂಜಾ ಹೇಳಿಕೆ ನೀಡಿದ್ದಾರೆ. ಇತ್ತ ಕಿರಣ್ ಪೋಷಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.