ನ್ಯೂಸ್ ನಾಟೌಟ್ :ವಯನಾಟ್ ಕುಲವನ್ ದೈವಸ್ಥಾನದ ಮಹೋತ್ಸವ ಮತ್ತು ದೈವಕಂಟ್ಟು ಮಹೋತ್ಸವ ಪೆರಾಜೆಯ ಕುಂಬಳಚೇರಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.ಮಾರ್ಚ್ 3,4,5ರಂದು ನಡೆಯಲಿರುವ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಊರ-ಪರವೂರಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಈ ವೈಭವದ ಕಾರ್ಯಕ್ರಮಕ್ಕೆ ಈಗಾಗಲೇ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.ಮಾರ್ಚ್ 3 ರಂದು ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಿಂದ ಹಸಿರುವಾಣಿ ಹೊರಡಲಿದೆ. ಸಂಜೆ 5 ಗಂಟೆಗೆ ದೈವದ ಕಾರ್ಯಕ್ರಮ ಅರಂಭವಾಗಲಿದೆ.ಕೈವಿದ್, ದೈವಗಳ ಕೊಡುವಿಕೆ ಮತ್ತು ಪೊಟ್ಟನ್ ದೈವ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 4 ರಂದು ಬೆಳಗ್ಗೆ ಕೊರತಿಯಮ್ಮ ದೈವ, ಚಾಮುಂಡಿ ದೈವ, ವಿಷ್ಣುಮೂರ್ತಿ ದೈವ , ಗುಳಿಗ ದೈವದ ಕೋಲ , ಕಾರ್ನೋನ್ ದೈವದ ವೆಳ್ಳಾಟಂ, ಕೋರಚ್ಚನ್ ದೈವದ ವೆಳ್ಳಚ್ಚಾಟಂ , ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ವಿಷ್ಣುಮೂರ್ತಿ ದೈವದ ಆರಂಭ ,ವಯನಾಟ್ ಕುಲವನ್ ವೆಳ್ಳಚ್ಚಾಟಂ ನಡೆಯಲಿದೆ.
ಮಾರ್ಚ್ 5ರಂದು ಕಾರ್ನೋನ್ ದೈವ, ಕೋರಚ್ಚನ್ ದೈವ ,ಕಂಡನಾರ್ ಕೇಳನ್ ದೈವ , ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ , ಮಹಾವಿಷ್ಣು ಮೂರ್ತಿ ದೈವದ ಅಂಗಣ ಪ್ರವೇಶ ಮರ ಪಿಳರ್ಕಲ್ ,ನಂತರ ಕೈವೀದ್ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಮತ್ತು ಸದಸ್ಯರು ತಿಳಿಸಿದ್ದಾರೆ.