ನ್ಯೂಸ್ ನಾಟೌಟ್: ಯಾವುದೇ ನೋಟುಗಳ ಮೇಲೆ ಯಾವುದೇ ಬರಹಗಳು ಇದ್ದರು ಭಾರತೀಯ ರಿಸರ್ವ್ ಬ್ಯಾಂಕ್ನ ಹೊಸ ಮಾರ್ಗಸೂಚಿಗಳ ಪ್ರಕಾರ ಅಂತಹ ನೋಟುಗಳು ಮೌಲ್ಯ ಕಳೆದುಕೊಳ್ಳುತ್ತದೆ. ಅವುಗಳನ್ನು ಚಲಾಯಿಸಲಾಗುವುದಿಲ್ಲ ಎಂಬ ಮಾಹಿತಿಯೊಂದು ಎಲ್ಲೆಡೆ ಹರಿದಾಡುತ್ತಿತ್ತು. ಈ ಕುರಿತು ಆರ್ಬಿಐ ನಿರ್ಧಾರ ಏನು ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಚಾರವು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋವನ್ನು ಕೂಡ ತಲುಪಿದ್ದು ಅವರು ಈ ಕುರಿತು ಸ್ಪಷ್ಟನೆಯೊಂದಿಗೆ ಸತ್ಯಾಂಶ ತಳಿಸಿದ್ದಾರೆ. ಅಂತಹ ಯಾವುದೇ ಮಾರ್ಗಸೂಚಿಗಳನ್ನು ಆರ್ಬಿಐ ನೀಡಿಲ್ಲ ಆದರೆ, ನೋಟುಗಳು ಬೇಗ ಹಾಳಾಗದಂತೆ ಇರಲು ಯಾವುದೇ ನೋಟುಗಳ ಮೇಲೆ ಬರೆಯಬೇಡಿ ಎಂದು ಮನವಿ ಮಾಡಿದೆ ಎಂದು ಹೇಳಿದೆ.