ನ್ಯೂಸ್ ನಾಟೌಟ್ : ಶಾಲಾ ಸಮವಸ್ತ್ರ ಧರಿಸಿ ಕಾಲೇಜು ವಿದ್ಯಾರ್ಥಿಗಳು ರಸ್ತೆ ಮಧ್ಯದಲ್ಲೇ ನಮಾಜ್ ಮಾಡಿದ ಘಟನೆ ಮಂಗಳೂರು ನಗರದ ಬಾವುಟ ಗುಡ್ಡದ ಪಕ್ಕದ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಂಗಳೂರಿನ ನಡುರಸ್ತೆಯಲ್ಲಿ ವಿದ್ಯಾರ್ಥಿಗಳು ನಮಾಝ್ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು , ಇದನ್ನು ಪ್ರಶ್ನಿಸುವವರು ಯಾರೂ ಇಲ್ಲವೇ? ನಮಾಝ್ ಮಾಡಲು ಮಸೀದಿ ಇರುವಾಗ ಈ ತರ ಅಪಹಾಸ್ಯ ನಡವಳಿಕೆ ಸರಿಯಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
“ಹಿಂದೂಗಳ ಪ್ರತಿಯೊಂದು ಹಬ್ಬಕ್ಕೂ ಅನುಮತಿ ಕೇಳುವ ಪೊಲೀಸ್ ಹಾಗೂ ಜಿಲ್ಲಾಡಳಿತ ಈಗ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಯಾವ ಜನಪ್ರತಿನಿಧಿಗಳಿಗೆ ಇದನ್ನು ನಿಲ್ಲಿಸಲು ಧೈರ್ಯ ಇಲ್ಲದಾಗಿದೆ”, ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ವ್ಯಾಪಕವಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.