ನ್ಯೂಸ್ ನಾಟೌಟ್ : ಸಿರಿಧಾನ್ಯಗಳಲ್ಲಿ ಒಂದಾದ ರಾಗಿಯನ್ನು ನಿತ್ಯ ಆಹಾರ ಪದ್ದತಿಯಲ್ಲಿ ಬಳಸಿದರೆ ಆರೋಗ್ಯಕ್ಕೆ ಉತ್ತಮ ಪ್ರಯೋಜಗಳು ಸಿಗುತ್ತವೆ. ರಾಗಿಯಲ್ಲಿ ಹೆಚ್ಚು ಪೌಷ್ಠಿಕ- ಪೊಷಕಾಂಶಗಳ ಗುಣಗಳಿವೆ.ರಾಗಿಯಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳಿವೆ.ನಾರಿನಂಶ, ಪ್ರೋಟೀನ್, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಶಿಯಂ, ಬಿ ಜೀವಸತ್ವಗಳಿವೆ. ಮಕ್ಕಳಿಗೆ ರಾಗಿ ಅಭ್ಯಾಸ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ರಾಗಿಯನ್ನು ಕೊಡುವುದು ಮರೆತಂತಿದೆ. ಅಂಗಡಿಯಿಂದ ದೊರೆಯುವ ರೆಡಿಮೆಡ್ ಆಹಾರಗಳನ್ನು ಸಣ್ಣ ಮಕ್ಕಳಿಗೆ ಕೊಟ್ಟು ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ರಾಗಿ ಉತ್ಪನ್ನಗಳ ತಿನುಸುಗಳಿಗೆ ಆಸಕ್ತಿ ತೋರದಿರಬಹುದು. ಆದರೆ ರಾಗಿ ಸೇವನೆಯು ಮಕ್ಕಳ ಆರೋಗ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಮಕ್ಕಳ ಜೀರ್ಣಕ್ರಿಯೆಯನ್ನು ಸುಲಭವನ್ನಾಗಿ ಮಾಡುತ್ತದೆ. ಉತ್ತಮವಾದ ಅಲರ್ಜಿರಹಿತ ಆಹಾರವಾಗಿದೆ. ಮಕ್ಕಳಲ್ಲಿ ರಾಗಿ ಸೇವನೆ ಆಸಕ್ತಿಯನ್ನು ಹೆಚ್ಚಿಸಲು ವಿವಿಧ ಬಗೆಯ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳಿ. ರಾಗಿಯು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ಮಾತ್ರವಲ್ಲದೇ ದೊಡ್ಡವರು ಎಲ್ಲರೂ ಕೂಡ ಉಪಯೋಗಿಸಬಹುದು.
ರಾಗಿ ಕುಷ್ಠರೋಗವನ್ನು ನಿವಾರಿಸಲು ಪ್ರಯೋಜನಕಾರಿಯಾಗಿದೆ. ಇದು ಗಂಭೀರ ಕಾಯಿಲೆಯಾಗಿದ್ದು, ಇದಕ್ಕಾಗಿ ರಾಗಿ ತಿನ್ನುವುದು ಉತ್ತಮ.
ಭಾರತದಲ್ಲಿ ಅನೇಕ ಜನರು ಸ್ಥೂಲಕಾಯತೆಯಿಂದ ತೊಂದರೆಗೀಡಾಗಿದ್ದಾರೆ. ಆದರೆ ನಾವು ನಮ್ಮ ಆಹಾರದ ಗಮನ ಕೊಟ್ಟರೆ,ಬೊಜ್ಜನ್ನು ಸುಲಭವಾಗಿ ತೊಡೆದುಹಾಕಬಹುದು. ರಾಗಿ ದೇಹದೊಳಗೆ ಕೊಬ್ಬನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು, ಅದಕ್ಕಾಗಿಯೇ ಜನರು ಇದನ್ನು ಸೇವಿಸುವ ಅಗತ್ಯವಿದೆ.
ರಾಗಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ರಾಗಿಗಳಲ್ಲಿ ಸುಮಾರು 344 ಮಿ.ಗ್ರಾಂ ಕ್ಯಾಲ್ಸಿಯಂ ಕಂಡುಬರುತ್ತದೆ. ಇದು ಮೂಳೆಗಳಿಗೆ ಉತ್ತಮ ಶಕ್ತಿಯನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ.
ರಾಗಿ ಅಮೈನೋ ಆಮ್ಲಗಳು ಮತ್ತು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ, ರಾಗಿ ಸೇವಿಸುವ ಮೂಲಕ ಚರ್ಮವು ಯಾವಾಗಲೂ ಹೊಳಪಾಗಿ ಕಾಣುತ್ತದೆ ಮತ್ತು ಇದು ಚರ್ಮದ ಅಂಗಾಂಶವನ್ನು ಸರಿಪಡಿಸುತ್ತದೆ.ಇದು ಸುಕ್ಕುಗಳಿಗೆ ಕಾರಣವಾಗುವುದಿಲ್ಲ. ಹಾಗಾಗಿ ರಾಗಿ ತಿನ್ನುವುದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ರಾಗಿ ಒಳಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಗಳಿವೆ. ಈ ಕಾರಣದಿಂದಾಗಿ ಅನೇಕ ಮಧುಮೇಹ ರೋಗಿಗಳು ರಾಗಿಯನ್ನು ಸೇವಿಸುತ್ತಾರೆ. ಮಧುಮೇಹದಿಂದ ಪರಿಹಾರ ಪಡೆಯಲು ನೀವು ಇಂದಿನಿಂದ ರಾಗಿ ಬಳಸಬೇಕು.