ನ್ಯೂಸ್ ನಾಟೌಟ್: ಇಂದು ಬೆಳಗ್ಗೆ ಟರ್ಕಿ ಮತ್ತು ಸಿರಿಯಾದ ದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಒಟ್ಟು 500ಕ್ಕೂ ಅಧಿಕ ಮಂದಿ ಮೃತಪಟ್ಟು ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕಂಪನದ ತೀವ್ರತೆ 7.8ರ ಪ್ರಮಾಣದಲ್ಲಿತ್ತು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಡಿದವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಭೂಕಂಪನದ ತೀವ್ರತೆಗೆ ಸಿಲುಕಿ ಹಲವಾರು ಕಟ್ಟಡಗಳು ಧರೆಗುರುಳಿವೆ. ಕಟ್ಟಡದಡಿಯಲ್ಲಿ ಸಿಲುಕಿದ ಅವಶೇಷಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಟರ್ಕಿಯಲ್ಲಿ 284 ಮಂದಿ ಮೃತಪಟ್ಟಿದ್ದು, 2300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ನೆರೆಯ ರಾಷ್ಟ್ರ ಸಿರಿಯಾದಲ್ಲಿ237 ಮಂದಿ ಮೃತಪಟ್ಟು 630 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವಾರು ಮಂದಿ ಕಟ್ಟಡದಡಿ ಸಿಲುಕಿ ನಾಪತ್ತೆಯಾಗಿದ್ದಾರೆ. ಸಿರಿಯಾ ಗಡಿಯಿಂದ 60 ಮೈಲು ದೂರದ ಗಾಜಿಯಾಂಟೆಪ್ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರಾಶ್ರಿತರು ವಾಸವಾಗಿದ್ದರು. ಆಗ್ನೇಯ ಗಾಜಿಯಾಂಟೆಪ್, ಟರ್ಕಿಯ ಪ್ರಮುಖ ಕೈಗಾರಿಕಾ ಹಾಗೂ ಉತ್ಪಾದನಾ ಕೇಂದ್ರಗಳಾಗಿವೆ. ಟರ್ಕಿಯ ಭೂಕಂಪದಿಂದಾಗಿ ಲೆಬನಾನ್, ಸಿರಿಯಾ, ಸಿಪ್ರಸ್ ಗಳಲ್ಲಿಯೂ ಕಂಪನದ ಅನುಭವ ಆಗಿದೆ.