ನ್ಯೂಸ್ ನಾಟೌಟ್ : ಸಂಪಾಜೆಯ ಕೈಪಡ್ಕ ಶ್ರೀ ಕೊರಗಜ್ಜ ಸ್ವಾಮಿ ದೈವದ ನೇಮೋತ್ಸವ ಮತ್ತು ಹರಕೆಯ ಕೋಲ ಸೇವೆಯು ಮಂಗಳವಾರ ಫೆಬ್ರವರಿ ೭ರಂದು ನಡೆಯಿತು.
ಸ್ವಾಮಿ ಕೊರಗಜ್ಜ ನೇಮೋತ್ಸವದಲ್ಲಿ ಬೆಳಿಗ್ಗೆ ಗಣಹೋಮ ,ಶುದ್ಧೀಕರಣ, ಮತ್ತು ದೀಪಾರಾಧನೆ ನಡೆಯಿತು. ಸಂಜೆ 6 ಗಂಟೆಯಿಂದ ದೈವ ನರ್ತಕರಿಗೆ ಎಣ್ಣೆ ಕೊಡುವುದು, ಗುಳಿಗ ದೈವದ ಕೋಲ, ಕೊರಗಜ್ಜ ದೈವಗಳಿಗೆ ನೇಮೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಿತು.
ನೇಮೋತ್ಸವದಲ್ಲಿ ಕ್ಷೇತ್ರದ ಮೊಕ್ತೇಸರರು ಮತ್ತು ಆಡಳಿತ ಸಮಿತಿಯ ಅಧ್ಯಕ್ಷರು,ಕಾರ್ಯದರ್ಶಿ, ಸರ್ವಸದಸ್ಯರು ಹಾಗೂ ಊರು- ಪರವೂರಿನಿಂದ ಆಗಮಿಸಿದ ಭಕ್ತರು ಪಾಲ್ಗೊಂಡು ಅಜ್ಜನ ಪ್ರಸಾದ ಪಡೆದು ಕೃಪೆಗೆ ಪಾತ್ರರಾದರು.