ನ್ಯೂಸ್ ನಾಟೌಟ್: 65 ನೇ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಯನ್ನು ಕನ್ನಡಿಗ ಸಂಗೀತ ನಿರ್ದೇಶಕ ರಿಕಿ ಕೇಜ್ ತನ್ನ ಮೂರನೇ ಬಾರಿಗೆ ಪಡೆದುಕೊಂಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಇದರೊಂದಿಗೆ ಮೂರು ಗ್ರ್ಯಾಮಿ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಸಂಗೀತ ನಿರ್ದೇಶಕ ಎನ್ನುವ ಕೀರ್ತಿಯೂ ರಿಕಿ ಕೇಜ್ ಯವರದ್ದಾಗಿದೆ.
64ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮವು ಲಾಸ್ ವೇಗಸ್ನ ಎಮ್.ಜಿ.ಎಮ್.ಗ್ರ್ಯಾಂಡ್ ಗಾರ್ಡನ್ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲೂ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಈಗ ಪಡೆದಿರುವುದು ಸತತ ಮೂರನೇ ಬಾರಿಯ ಎನ್ನುವುದು ವಿಶೇಷ.
ಡಿವೈನ್ ಟೈಡ್ಸ್ ಎಂಬ ಆಲ್ಬಂ ಬೆಸ್ಟ್ ಇಮ್ಮರ್ಸೀವ್ ಆಡಿಯೋ ಆಲ್ಬಂ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್ನ ಡ್ರಮ್ಮರ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಈ ಪ್ರಶಸ್ತಿಯನ್ನು ರಿಕಿ ಕೇಜ್ ಹಂಚಿಕೊಂಡಿದ್ದಾರೆ.
ಉತ್ತರ ಕೆರೊಲಿನಾದಲ್ಲಿ 1981 ರಲ್ಲಿ ಜನಿಸಿದ, ಶ್ರೀ ಕೇಜ್ 8 ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನಲ್ಲಿ ದಂತವೈದ್ಯಶಾಸ್ತ್ರದಲ್ಲಿ ಪದವಿ ಪೂರೈಸಿರುವ ಇವರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಓದಿದ ಇವರು ಗೆದ್ದ ಸಂಭ್ರಮವನ್ನು ರಿಕಿ ಕೇಜ್ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ರಿಕ್ಕಿ ಕೇಜ್ ಸಾಂಪ್ರಾದಾಯಿಕ ಉಡುಗೆ ತೊಟ್ಟಿದ್ದದ್ದು ಭಾರತೀಯನ್ನು ಪ್ರತಿನಿಧಿಸಿದರು. ರಿಕಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು 4 ನೇ ಭಾರತೀಯ ಎನ್ನಲಾಗಿದೆ.
ಇತರ ನಾಮನಿರ್ದೇಶನಗಳು:
ಕ್ರಿಸ್ಟಿನಾ ಅಗುಲೆರಾ ((Aguilera), ದಿ ಚೈನ್ಸ್ಮೋಕರ್ಸ್ ( Memories Do Not Open), ಜೇನ್ ಇರಾಬ್ಲೂಮ್ (Picturing The Invisible- Focus 1), ಮತ್ತು ನಿಡಾರೊಸ್ಡೊಮೆನ್ಸ್ ಜೆಂಟೆಕೋರ್ ಮತ್ತು ಟ್ರೊಂಡೆಹೈಮ್ಸೊಲಿಸ್ಟೆನ್ (Tuvahyun – Beatitudes for a Wounded World).