ನ್ಯೂಸ್ ನಾಟೌಟ್: ಹೆಣ್ಣಾಗಿ ಜನಿಸಿ ಪುರುಷನಾಗಿ ಬದಲಾದ ಹಾಗೂ ಗಂಡಾಗಿ ಜನಿಸಿ ಮಹಿಳೆಯಾಗಿ ಬದಲಾದ ಟ್ರಾನ್ಸ್ಜೆಂಡರ್ (ತೃತೀಯ ಲಿಂಗಿ) ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೇರಳದಲ್ಲಿ ಇಬ್ಬರು ಪರಸ್ಪರ ಸಮ್ಮತಿಸಿಕೊಂಡು ಲಿಂಗ ಬದಲಿಸಿಕೊಂಡಿದ್ದರು. ಕೃತಕ ಗರ್ಭಧಾರಣೆಯನ್ನುಕೂಡ ಮಾಡಿಸಿಕೊಂಡಿದ್ದರು. ಇದೀಗ ಕ್ಕೋಯಿಕ್ಕೋಡ್ನ ಉಮ್ಮಲತ್ತೂರ್ನ ಟ್ರಾನ್ಸ್ಜೆಂಡರ್ ದಂಪತಿ ಜಿಯಾ ಮತ್ತು ಜಹಾದ್ ಈ ಸಂತೋಷದ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ. ದೇಶದ ಮೊದಲ ತೃತೀಯ ಲಿಂಗಿ ಗರ್ಭಧಾರಣೆ ಇದಾಗಿದೆ ಅನ್ನುವುದು ವಿಶೇಷ.
ಅಪ್ಪನೂ ನಾನೇ ಅಮ್ಮನೂ ನಾನೇ ಎಂದು ದೇಶದ ಮೊದಲ ಟ್ರಾನ್ಸ್ಮನ್ ಅಪ್ಪ ಆಗಲಿರುವ ಜಹಾದ್ ಬರೆದುಕೊಂಡಿದ್ದಾರೆ. ಮಗುವನ್ನು ದತ್ತು ಪಡೆಯುವುದಕ್ಕೆ ಕಾನೂನು ಹಾದಿ ಕಠಿಣವಾಗಿದ್ದರಿಂದ ತೃತೀಯ ಲಿಂಗಿ ಗರ್ಭಧಾರಣೆ ಬಗ್ಗೆ ಯೋಚನೆ ಮಾಡಿರುವುದಾಗಿ ಈ ದಂಪತಿ ವಿವರಿಸುತ್ತಾರೆ.
https://www.instagram.com/p/CoFoTzxvjWH/?utm_source=ig_web_copy_link