ನ್ಯೂಸ್ ನಾಟೌಟ್: ಮಕ್ಕಳು ತಪ್ಪು ದಾರಿಯಲ್ಲಿ ನಡೆದರೆ ಬುದ್ಧಿ ಹೇಳಿ ಅವರನ್ನು ಸರಿ ದಾರಿಯಲ್ಲಿ ನಡೆಯುವ ಹಾಗೆ ಮಾಡುವುದು ಶಿಕ್ಷಕರ ಕರ್ತವ್ಯ. ಅಂತಹ ಶಿಕ್ಷಕರೆ ಮಕ್ಕಳ ಜೀವನವನ್ನು ಹಾಳು ಮಾಡಿದರೆ ಸಮಾಜದ ಗತಿಯೇನು? ತರಗತಿಯ ಬಗ್ಗೆ ಗಮನ ಕೊಡದೆ ಜೀವನ ಹಾಳು ಮಾಡಿಕೊಳ್ಳುವ ಮಕ್ಕಳಿಗೆ,ಯಾವುದು ಸರಿ? ಯಾವುದು ತಪ್ಪು? ಎಂದು ಹೇಳಿಕೊಡುವ ಶಿಕ್ಷಕರೇ ತಪ್ಪು ದಾರಿ ಹಿಡಿದರೆ ಹೇಗೆ?. ಇದಕ್ಕೆ ಉದಾಹರಣೆಯಂತೆ ಇಲ್ಲೊಂದು ಘಟನೆ ನಡೆದಿದೆ.
ಘಟನೆಯ ವಿವರ:
ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಪಿ. ನಾಗಭೂಷಣ್ ಅವರು ವಿದ್ಯಾರ್ಥಿನಿಯರ ಮೊಬೈಲ್ಗೆ ಅಸಭ್ಯ ಸಂದೇಶ ಕಳುಸಿದ್ದಾರೆ. ಈ ವಿಚಾರವಾಗಿ ಅವರ ಬಳಿ ಪ್ರಶ್ನೆ ಮಾಡಿದಾಗ ತನ್ನ ತಪ್ಪನ್ನು ತಿದ್ದಿಕೊಳ್ಳುವುದಾಗಿ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದ ಅವರು ಮತ್ತೆ ಮುಂದುವರಿಸಿದ್ದು ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಶಿಕ್ಷಕನ ಈ ದುರ್ವರ್ತನೆ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆ ಅಮಾನತು ಮಾಡಲಾಗಿದೆ. ಅಲ್ಲದೇ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶಿಕ್ಷಕನೇ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಶಿಕ್ಷಕನಿಗೆ ವಿದ್ಯಾರ್ಥಿನಿಯರ ಮೇಲಿದ್ದ ಕೆಟ್ಟ ದೃಷ್ಟಿಯೇ ಈ ಅಮಾನತಿಗೆ ಕಾರಣವಾಗಿದೆ.