ನ್ಯೂಸ್ನಾಟೌಟ್: ಕೇಂದ್ರ ಗೃಹಸಚಿವ ಅಮಿತ್ ಶಾ ಫೆ. 11ರಂದು ಹನುಮಗಿರಿ ಕ್ಷೇತ್ರದ ಅಮರಗಿರಿಯ ಉದ್ಘಾಟನೆಗೆ ಆಗಮಿಸುವ ಹಿನ್ನೆಲೆಯಲ್ಲಿ ಗುರುವಾರ ಹನುಮಗಿರಿಯಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಗಣ್ಯ ವ್ಯಕ್ತಿಗಳ ರಕ್ಷಣಾ ಕಮಾಂಡರ್ ಹಜೇರಿ ಲಾಲ್, ವಿಂಗ್ ಕ್ರಾಫ್ಟ್ ಕಮಾಂಡರ್ಗಳಾದ ಗೌರವ ಸಿಂಗ್, ಕಮಲೇಶ್ ಸಿಂಗ್, ಸಹಾಯಕ ಕಮಾಂಡರ್ ವಿಭಾಶ್ ರಾಯ್, ಗುಪ್ತಚರ ಸಂಸ್ಥೆಯ ಷಾಜಿ ಎಂ.ವಿ., ಅಡಿಶನಲ್ ಎಸ್ಪಿ ಧರ್ಣಪ್ಪ, ಎಸಿ ಗಿರೀಶ್ ನಂದನ್, ಡಿಎಸ್ಪಿ ಡಾ.ಗಾನ ಪಿ. ಕುಮಾರ್, ಡಿವೈಎಸ್ಪಿ ವೀರಯ್ಯ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.
ಸಭೆ ಬಳಿಕ ಗೃಹ ಸಚಿವರು ಆಗಮಿಸುವ ಈಶ್ವರಮಂಗಲದ ಹೆಲಿಪ್ಯಾಡ್, ಹನುಮಗಿರಿ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.