ನ್ಯೂಸ್ ನಾಟೌಟ್: ಶಾಸಕ ಹರೀಶ್ ಪೂಂಜಾ ಅವರು ಚಿಲ್ಲರೆ ರಾಜಕೀಯವನ್ನು ಬಿಟ್ಟು ಹೊರಗೆ ಬರಬೇಕು ಎಂದು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಾಗೂ ಕಾಂಗ್ರೆಸ್ ನವರು ನಮಗೆ ಎಲ್ಲರೂ ಒಂದೇ. ತಪ್ಪು ಮಾಡಿದವರನ್ನು ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ. ಹರೀಶ್ ಪೂಂಜಾ ಅವರು ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ದುಡಿದು ಪೊಲೀಸ್ ಕೇಸ್ ಹಾಕಿಸಿಕೊಂಡಿದ್ದಾರೆ. ಅಂತಹ ಹುಡುಗನನ್ನು ತನಗೆ ಬೇಕಾದಾಗ ಚೆನ್ನಾಗಿ ಉಪಯೋಗಿಸಿ ಈಗ ಆತನ ಗಡಿಪಾರಿಗೆ ಆದೇಶಿಸಿದ್ದಾರೆ. ಇದು ಯಾವ ಸೀಮೆ ನ್ಯಾಯ ಸ್ವಾಮಿ? ಎಂದು ತಿಮರೋಡಿ ಕಿಡಿಕಾರಿದ್ದಾರೆ.
ಜನರಿಂದಾಗಿ ಹರೀಶ್ ಪೂಂಜಾಗೆ ಶಕ್ತಿ ಇರುವುದು, ಒಂದು ಸಲ ಅಧಿಕಾರದಿಂದ ಕೆಳಕ್ಕೆ ಇಳಿದು ನೋಡಲಿ. ಆಗ ವಿಲವಿಲ ಒದ್ದಾಡಬೇಕಾಗುತ್ತದೆ. ಆಗ ಇವರ ಹಿಂದುತ್ವ ಏನಿದೆ ಅನ್ನುವುದು ಬಟಾ ಬಯಲಾಗುತ್ತದೆ ಎಂದು ತಿಮರೋಡಿ ಹರಿಹಾಯ್ದಿದ್ದಾರೆ. ರಾಜಕೀಯಕ್ಕೆ ಹೋಗುವ ಮೊದಲು ಅವರು ನಾನು ಧರ್ಮಜಾಗೃತಿಯ ಕೆಲಸ ಮಾಡುತ್ತೇನೆ ಅಂದಿದ್ದರು , ಆದರೆ ಅದೇ ಹರೀಶ್ ಪೂಂಜಾ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಹಿಂದೂ ಕಾರ್ಯಕರ್ತನಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.