ಫೆ. ೧೪ ರಂದು ಕವ್ ಹಗ್ ಡೇ ಆಗಿ ಆಚಣೆಗೆ ಸುತ್ತೋಲೆ
ನ್ಯೂಸ್ ನಾಟೌಟ್: ವಿದೇಶದಲ್ಲಿ ಪ್ರತಿಯೊಂದು ಆಚರಣೆಗೆ ಒಂದೊಂದು ದಿನವಿರುತ್ತದೆ. ಫೆ.14ರಂದು ಪ್ರೇಮಿಗಳ ದಿನವೆಂದು ಆಚರಿಸುತ್ತಿದ್ದು, ಇತ್ತೀಚೆಗೆ ನಮ್ಮಲ್ಲೂ ಕೆಲವರು ಇದನ್ನು ಕೆಲವರು ಅನುಸರಿಸುತ್ತಾರೆ. ಅದಕ್ಕೆ ಪರ ವಿರೋಧ ಚರ್ಚೆಗಳು ಪ್ರತಿ ವರ್ಷವೂ ನಡೆಯುತ್ತಿರುತ್ತದೆ.
ಇದೀಗ ವಿದೇಶಿ ಸಂಸ್ಕೃತಿಯಾದ ಪ್ರೇಮಿಗಳ ದಿನದ ಬದಲಿಗೆ ಇನ್ನು ಮುಂದೆ ಈ ದಿನವನ್ನು ಗೋವು( ಹಸು) ಗಳನ್ನು ಅಪ್ಪುಗೆ ದಿನವಾಗಿ ಆಚರಿಸಬೇಕು ಎಂದು ಕೇಂದ್ರ ಪಶುಸಂಗೋಪನಾ ಡೇರಿ ಮತ್ತು ಇಲಾಖೆ ಸುತ್ತೋಲೆ ಹೊರಡಿಸಿದೆ.
ಭಾರತದಲ್ಲಿ ಗೋವಿಗೆ ವಿಶೇಷ ಸ್ಥಾನ ನೀಡಲಾಗಿದೆ. ಗೋಮಾತೆ ಹಿಂದುಗಳ ದೇವರ ಪ್ರತೀಕವಾಗಿದೆ. ನಿತ್ಯ ಗೋಮಾತೆಯ ಆರಾಧನೆಯಿಂದ ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತದೆ. ಗೋವನ್ನು ಅಪ್ಪಿಕೊಳ್ಳುವುದರಿಂದ ಶ್ರೀಮಂತಿಕೆ, ಜತೆಗೆ ಸಾಮೂಹಿಕ ಸಂತೋಷ ಹೆಚ್ಚಾಗುತ್ತದೆ. ಹೀಗಾಗಿ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನಾಗಿ ಆಚರಿಸುವ ಬದಲು ‘ಕವ್ ಹಗ್’ ಡೇ ಆಗಿ ಆಚರಿಸುವಂತೆ ಕೇಂದ್ರ ಪಶುಸಂಗೋಪನಾ, ಡೇರಿ ಮತ್ತು ಇಲಾಖೆ ಕರೆ ನೀಡಿದೆ.