ನ್ಯೂಸ್ ನಾಟೌಟ್ : ಹಿಂದೆಲ್ಲ ರುಚಿಯಾದ ಆಡುಗೆ ತಯಾರಿಸಲು ಪ್ರತಿಯೊಬ್ಬರೂ ಕಟ್ಟಿಗೆಯನ್ನ ಅವಲಂಭಿಸುತ್ತಿದ್ದರು. ಆದರೆ ಇಂದು ಕಾಲ ಹಾಗಿಲ್ಲ ಅನ್ನುವುದೇ ವಿಶೇಷ. ನಾಗಾಲೋಟದಿಂದ ಚಿಮ್ಮುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಎಲ್ಪಿಜಿ ಗ್ಯಾಸ್ ಸಂಪರ್ಕ ಇದ್ದೇ ಇದೆ. ಈ ಸಿಲಿಂಡರ್ನ ಬೆಲೆಯೋ ಪ್ರತಿ ತಿಂಗಳು ಏರುತ್ತಲೇ ಇದೆ. ಈ ಬಗ್ಗೆ ಸಾರ್ವಜಿನಿಕರು ಅಪಸ್ವರ ಎತ್ತಿರುವಾಗಲೇ ಗ್ರಾಹಕರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ.
ಗ್ಯಾಸ್ ಸಿಲಿಂಡರ್ ಗಳ ಬೆಲೆ ಹೆಚ್ಚಾದ ಕಾರಣ ಜನರಿಗೆ ತೊಂದರೆ ಆಗುತ್ತದೆ ಎನ್ನುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಗ್ಯಾಸ್ ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುವ ಮೂಲಕ ಜನರಿಗೆ ಸಹಾಯ ಮಾಡಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೩-೨೪ ರ ಸಾಲಿನ ಕೇಂದ್ರ ಬಜೆಟ್ ಮಂಡನೆಯನ್ನು ಫೆ.೧ರಂದು ಮಂಡಿಸಿದ್ದರು. ಈ ಬಜೆಟ್ ಮಂಡನೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ಗಳ ಮೇಲಿನ ಕೇಂದ್ರದ ಸಬ್ಸಿಡಿಯನ್ನು ಹೆಚ್ಚಿಸಲು ಯೋಜಿಸಿದೆ ಎಂದು ಎನ್ನಲಾಗಿದೆ. ಅಲ್ಲದೆ ಕೆಂದ್ರವು ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ತರಲಿದೆ ಎಂದು ತಿಳಿದು ಬಂದಿದೆ. ಈ ವರ್ಷದ ಬಜೆಟ್ ಮೇಲೆ ಜನರು ಹೆಚ್ಚಿನ ಭರವಸೆ ಹೊಂದಿದ್ದರು. ಕಳೆದ ವರ್ಷ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಗೆ ೫,೮೧೨ ಕೋಟಿ.ರೂ. ಈ ಯೋಜನೆಯ ಮೂಲಕ ಕೇಂದ್ರ ಸರಕಾರ ವರ್ಷಕ್ಕೆ ೧೨ ಸಿಲಿಂಡರ್ ಗಳಿಗೆ ಸಬ್ಸಿಡಿಯನ್ನು ಘೋಷಿಸಿತ್ತು. ಈ ವರ್ಷ ಸರ್ಕಾರ ಘೋಷಿಸಿದ ಸಬ್ಸಿಡಿ ಅಡಿಯಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್ ಗೆ ೨೦೦ ರೂ. ಸುಮಾರು ೯ ಕೋಟಿ ಜನರು ಈಗಾಗಲೇ ಈ ಯೋಜನೆಯ ಮೂಲಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ವರ್ಷದ ಬಜೆಟ್ ಮಂಡನೆಯ ಬಳಿಕ ಕೇಂದ್ರ ಸರಕಾರದ ಯೋಜನೆಯ ಮೂಲಕ ದೇಶದ ಇತರ ಕುಟುಂಬಗಳಿಗೆ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಗಳನ್ನು ವಿತರಿಸಲು ಯೋಜನೆ ಹಾಕಿಕೊಂಡಿದೆ.