ನ್ಯೂಸ್ ನಾಟೌಟ್ : ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಭಿ ಸುರೇಶ್ ಅನಾರೋಗ್ಯದಿಂದ (42) ನಿಧನರಾಗಿದ್ದಾರೆ.
ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಸುಭಿ ಸುರೇಶ್ ಕಳೆದ ಕೆಲವು ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಲತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಡ್ಯಾನ್ಸರ್ ಹಾಗೂ ಕಾಮಿಡಿಯನ್ ಆಗಿ ಕೆರಿಯರ್ ಆರಂಭಿಸಿದ ಸುಭಿ ಸುರೇಶ್’ ಮೇಡ್ ಫಾರ್ ಈಚ್ ಅದರ್, ಕುಟ್ಟಿ ಪಟ್ಟಾಳಂ ಎಂಬ ಮೆಗಾಶೋ ಕಾರ್ಯಕ್ರಮದ ನಿರೂಪಕಿಯಾಗಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಗೃಹನಾಥನ್ , ತಸ್ಕರ ಲಹಲಾ, ಎಲ್ಸಮ್ಮ ಎನ್ನ ಆಂಕುಟ್ಟಿ, ಡ್ರಾಮಾ , ಕಾರ್ಯಸ್ತನ್ ಮೊದಲಾದ ಮಲಯಾಳಂ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.