ನ್ಯೂಸ್ ನಾಟೌಟ್: ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾವು ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ನಮ್ಮ ದಿನನಿತ್ಯದ ಕೆಲಸ ಶುರುವಾಗುವುದೇ ಇದರಿಂದ ಎನ್ನಬಹುದು. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣಗಳೂ ಅಷ್ಟೇ ವೇಗವಾಗಿ ಕಾರ್ಯನಿರ್ವಹಿಸಬೇಕು. ಆದರೆ ಈಗ ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜಾಗತಿಕವಾಗಿ ಡೌನ್ ಆಗಿ ಸಾವಿರಾರು ಬಳಕೆದಾರರು ಪರದಾಡುವಂತಾಗಿದೆ. ಹೊಸ ಟ್ವೀಟ್ಗಳನ್ನು ಪೋಸ್ಟ್ ಮಾಡುವಾಗ ನೀವು ಟ್ವೀಟ್ಗಳನ್ನು ಕಳುಹಿಸುವ ದೈನಂದಿನ ಮಿತಿಯನ್ನು ಮೀರಿದ್ದೀರಿ ಎಂಬ ಪಾಪ್-ಆಪ್ ಬರುತ್ತಿರುವುದಾಗಿ ಕೆಲವು ಬಳಕೆದಾರರು ದೂರಿದ್ದಾರೆ.
ಫೇಸ್ಬುಕ್ನ 12,000ಕ್ಕೂ ಹೆಚ್ಚು ಬಳಕೆದಾರರು ಮತ್ತು ಇನ್ಸ್ಟಾಗ್ರಾಂನ ಸುಮಾರು 7,000 ಸಮಸ್ಯೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬಳಕೆದಾರರು ಫೇಸ್ಬುಕ್ನ ಆನ್ಲೈನ್ ಮೆಸೇಜಿಂಗ್ ಸೇವೆಯಲ್ಲಿ ಮೆಸೆಂಜರ್ನೊಂದಿಗೆ ಸಮಸ್ಯೆಗಳನ್ನು ಪೋಸ್ಟ್ ಮಾಡಿದ್ದಾರೆ.
ಟ್ವೀಟರ್ ನಿರೀಕ್ಷೆಯಂತೆ ಕೆಲಸ ಮಾಡದೆ ನಮ್ಮ ಕೆಲವು ಬಳಕೆದಾರರಿಗಾದ ಅಡಚಣೆಗೆ ಕಂಪನಿ ಕ್ಷಮೆ ಯಾಚಿಸಿದೆ. ಈ ತಾಂತ್ರಿಕ ಸಮಸ್ಯೆ ಶೀಘ್ರ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಟ್ವೀಟ್ ಮಾಡಿದೆ.