ನ್ಯೂಸ್ ನಾಟೌಟ್: ಮುಂಬೈನ ಜೆಂಬೂರಿನಲ್ಲಿ ಸೋಮವಾರ ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಮತ್ತು ಅವರ ತಂಡದ ಮೇಲೆ ಸ್ಥಳೀಯ ಶಿವಸೇನಾ ಶಾಸಕ ಪ್ರಕಾಶ್ ಫಟೆರ್ಪಕರ್ ಅವರ ಪುತ್ರ ಸ್ವಪ್ನಿಲ್ ಫಟೆರ್ಪಕರ್ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಯನ ಕಾರ್ಯಕ್ರಮ ಮುಗಿದ ಬಳಿಕ ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಸ್ವಪ್ನಿಲ್ ಫಟೆರ್ಪಕರ್ ಸೋನು ನಿಗಮ್ ಅವರನ್ನು ತಳ್ಳಿದ್ದಾನೆ. ಆ ವೇಳೆಗೆ ಸೋನು ನಿಗಮ್ ಅವರ ಬಾಡಿಗಾರ್ಡ್ ಹಾಗೂ ಸೋನು ನಿಗಮ್ ಸ್ನೇಹಿತ ರಬ್ಬನಿ ಖಾನ್ ರಕ್ಷಣೆಗೆ ಬಂದಿದ್ದಾರೆ.
ಶಾಸಕನ ಪುತ್ರ ತಳ್ಳಿದ ರಭಸಕ್ಕೆ ತಡೆಯಲು ಬಂದ ಸೋನು ನಿಗಮ್ ಅವರ ಸ್ನೇಹಿತ ಕೆಳಗೆ ಬಿದ್ದ ಪರಿಣಾಮ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ಸೋನು ನಿಗಮ್ ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಸೋನು ನಿಗಮ್ ಆ ವ್ಯಕ್ತಿಯ ಮೇಲೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.