ಆಕೆಯ ಮೂಳೆಗಳನ್ನು ಗ್ರೈಂಡರ್ ನಲ್ಲಿ ಪುಡಿ ಮಾಡಿದ್ದ ಅಫ್ತಾಬ್ !
ನ್ಯೂಸ್ನಾಟೌಟ್: ಪ್ರಿಯತಮೆಯನ್ನ 35 ತುಂಡುಗಳಾಗಿ ಕತ್ತರಿಸಿದ ಪ್ರೇಮಿ ಮತ್ತು ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿದ್ದ ದೆಹಲಿಯ ಕುಖ್ಯಾತ ಕೊಲೆ ಪ್ರಕರಣದ 6,600 ಪುಟಗಳ ಚಾರ್ಜ್ಶೀಟ್ ಭಯಾನಕ ವಿವರಗಳ ಸರಣಿಯನ್ನು ಪಟ್ಟಿಮಾಡಿದೆ.
ಅಫ್ತಾಬ್ ಪೂನಾವಾಲಾನಿಂದ ಕೊಲೆಯಾದ ಶ್ರದ್ಧಾ ವಾಕರ್ ಅವರ ಮೂಳೆಗಳ ಮೇಲೆ ಗ್ರೈಂಡರ್ ಕಲ್ಲು ಬಳಸಿ ಪುಡಿಮಾಡಿ ಮೂಲೆಗಳನ್ನು ವಿಲೇವಾರಿ ಮಾಡಿದ್ದರು. ಮೂರು ತಿಂಗಳ ನಂತರ ಆತ ಎಸೆದ ಕೊನೆಯ ತುಣುಕುಗಳಲ್ಲಿ ಆಕೆಯ ತಲೆಯ ಪುಡಿಗಳೂ ಇತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇತರ ವಿಷಯಗಳ ಜೊತೆಗೆ, ಮೇ 18 ರಂದು, ಶ್ರದ್ಧಾ ಅವರನ್ನು ಕೊಂದ ನಂತರ, ಪೂನಾವಾಲಾ ಜೊಮಾಟೊದಿಂದ ತಂದ ಚಿಕನ್ ರೋಲ್ನಲ್ಲಿ ಊಟ ಮಾಡಿದ್ದರು ಎಂದು ಸಹ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಶ್ರದ್ಧಾ ವಾಕರ್ ಮತ್ತು ಆಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು. ಆದರೆ ಆಗಲೇ ಸಂಬಂಧದ ನಡುವೆ ಬಿರುಕು ಮೂಡಿತ್ತು ಮತ್ತು ಇಬ್ಬರೂ ಖರ್ಚು-ವೆಚ್ಚಗಳು ಮತ್ತು ಅಫ್ತಾಬ್ ಪೂನಾವಾಲಾ ಅವರ ಅನೇಕ ಗೆಳತಿಯರ ಬಗ್ಗೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಜೊತೆಗೆ ಆತನಿಗೆ ದೆಹಲಿಯಿಂದ ದುಬೈ ತನಕ ಗೆಳತಿಯರಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮೇ 18 ರಂದು ಇಬ್ಬರೂ ಮುಂಬೈಗೆ ಹೋಗಲು ಯೋಜಿಸಿದ್ದರು, ಆದರೆ ಇದ್ದಕ್ಕಿದ್ದಂತೆ ಆಫ್ತಾಬ್ ಪೂನಾವಾಲಾ ಟಿಕೆಟ್ ರದ್ದುಗೊಳಿಸಿದರು. ಅದರ ನಂತರ ಕೊಲೆಯಾದ ದಿನ ಮತ್ತೊಂದು ಖರ್ಚುಗಳ ಬಗ್ಗೆ ಜಗಳವಾಗಿತ್ತು ಮತ್ತು ಆ ಕ್ಷಣ ಕೋಪಗೊಂಡ ಪೂನಾವಾಲಾ ಅವಳನ್ನು ಕತ್ತು ಹಿಸುಕಿದನು ಎಂದು ಉಲ್ಲೇಖಿಸಲಾಗಿದೆ.
35 ತುಂಡುಗಳಾಗಿ ಕತ್ತರಿಸಿದ ದೇಹವನ್ನು ಫ್ರಿಡ್ಜ್ನಲ್ಲಿ ಇರಿಸಲಾಗಿತ್ತು. ಪೂನಾವಾಲಾ ತನ್ನ ಗೆಳತಿಯರು ಭೇಟಿ ನೀಡಿದಾಗಲೆಲ್ಲ ಫ್ರಿಡ್ಜ್ನಿಂದ ಪೊಟ್ಟಣಗಳನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿ ಇಡುತ್ತಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಪೂನಾವಾಲಾ ಅವರು ಶ್ರದ್ಧಾ ವಾಲ್ಕರ್ ಅವರ ಮೊಬೈಲ್ ಅನ್ನು ಕೊಲೆಗೂ ಮುನ್ನವೇ ತಾನೇ ಇಟ್ಟುಕೊಂಡಿದ್ದರು. ಮೇ 18 ರ ನಂತರ ಆಕೆಯ ಖಾತೆಯು ಆತನ ಫೋನ್ನಿಂದ ಚಾಲನೆಯಾಗುತ್ತಿದೆ ಎಂದು ಗೂಗಲ್ ಡೇಟಾ ಬಹಿರಂಗಪಡಿಸಿದೆ. ನಂತರ ಮುಂಬೈನಲ್ಲಿ ಆಕೆಯ ಸೆಲ್ಫೋನ್ ಮತ್ತು ಲಿಪ್ಸ್ಟಿಕ್ ಅನ್ನು ವಿಲೇವಾರಿ ಮಾಡಿದ್ದಾನೆ ಎಂದು ಆರೋಪಪಟ್ಟಿ ಹೇಳಲಾಗಿದೆ.
ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು ಅವರು ವಿಧಿವಿಜ್ಞಾನ ಇಲಾಖೆಯ ಇನ್ನಷ್ಟು ಮಾಹಿತಿಗಾಗಿ ಕಾಯುತ್ತಿದ್ದಾರೆ ಮತ್ತು ಪ್ರತಿಯೊಂದು ಹಂತವನ್ನು ಸ್ವತಂತ್ರವಾಗಿ ದೃಢೀಕರಿಸಬೇಕಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.