ನ್ಯೂಸ್ ನಾಟೌಟ್: ಕ್ಷುಲ್ಲಕ ಕಾರಣಕ್ಕೆ ಮದುವೆ ನಿರಾಕರಿಸಿದ ವರನಿಗೆ ವಧು ವರನ ನಿರೀಕ್ಷೆಗೂ ಮೀರಿ ವಿಭಿನ್ನ ಬಗೆಯಲ್ಲಿ ಉತ್ತರ ನೀಡಿದ್ದಳು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ತಂದೆ ತಾಯಿಯ ಕಷ್ಟದ ಅರಿವೇ ಇರುವುದಿಲ್ಲ, ಮದುವೆ ದಿನವೇ ಮದುವೆಯನ್ನು ಮುರಿಯುವ ನಿರ್ಧಾರ ಮಾಡುತ್ತಾರೆ. ಅಂತಹದ್ದೇ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ.
ವಧುವಿನ ಅಪ್ಪ ಸೆಕೆಂಡ್ ಹ್ಯಾಂಡ್ ಮಂಚವನ್ನು ನೀಡಿದ್ದಾರೆಂದು ವರ ವಿವಾಹವನ್ನೇ ನಿರಾಕರಿಸಿದ ಘಟನೆ ಎಲ್ಲೆಡೆ ಸುದ್ದಿಯಾಗುತ್ತದೆ. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಅಪರಾಧವಾಗಿದ್ದು ಹೈದರಾಬಾದ್ ನ ಕುಟುಂಬವೊಂದು ತಮಗೆ ವರದಕ್ಷಿಣೆಯಾಗಿ ನೀಡಿರುವ ಪೀಠೋಪಕರಣಗಳು ಹಳೆಯದಾಗಿದೆ ಎಂದು ಸಬೂಬು ಹೇಳಿ ಮದುವೆಯ ದಿನ ವರ ಮಂಟಪಕ್ಕೆ ಬಾರದೆ ಮದುವೆಯನ್ನು ನಿರಾಕರಿಸಿದ್ದಾನೆ.
ಮದುವೆ ಇನ್ನೇನು ಮುಗಿದೇ ಬಿಡುತ್ತದೆ ಅನ್ನುವಷ್ಟರಲ್ಲಿ , ವಧುವಿನ ಸಂಬಂಧಿಕರು ತನಗೆ ಸೆಕೆಂಡ್ ಹ್ಯಾಂಡ್ ಮಂಚ, ಹಾಸಿಗೆಯನ್ನು ಕೊಟ್ಟಿದ್ದಾರೆ ಎಂದು ತಿಳಿದ ವರ ಮದುವೆಯಾಗಲು ನಿರಾಕರಿಸಿ ಮಂಟಪದಿಂದ ಹೊರಗೆ ಹೋಗಿದ್ದಾನೆ. ಈ ವಿಚಾರವಾಗಿ ಬೇಸರ ಹಾಗೂ ಭಯಗೊಂಡ ವಧುವಿನ ತಂದೆ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ವರನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ‘ಇಷ್ಟು ಸಣ್ಣ ವಿಚಾರಕ್ಕೆ ಮದುವೆ ನಿರಾಕರಿಸಿದ್ದಾನೆ ಹಾಗಾಗಿ ಈತನನ್ನು ನಾನು ಮದುವೆಯಾಗಲಾರೆ’ ಎಂದು ಹೇಳಿ ವಧು ನೆರೆದಿದ್ದ ಸಂಬಂಧಿಕರಿಗೆ ಟ್ವಿಸ್ಟ್ ಕೊಟ್ಟಿದ್ದಾಳೆ.