ನ್ಯೂಸ್ ನಾಟೌಟ್ : ನಾಯಿ ನಂಬಿಕೆಯ ಪ್ರಾಣಿ.ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ.ಇವುಗಳು ಮನೆಯನ್ನು ಕಾಯುತ್ತಿದ್ದರೆ ಮನೆ ಯಜಮಾನನಿಗೆ ಧೈರ್ಯ.ಆದರೆ ಅವುಗಳ ಆರೋಗ್ಯ ಕಾಪಾಡುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ಆರೋಗ್ಯವಂತ ನಾಯಿಗಳು ೧೫ರಿಂದ ೧೮ ವರ್ಷ ಬದುಕುತ್ತವೆ ಎಂದು ಹೇಳಲಾಗುತ್ತಿದೆ.ಸೋಂಕು , ಇನ್ನಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬದುಕುಳಿಯುವುದು ಕಷ್ಟ.ಆದರೆ ಇಲ್ಲೊಂದು ಶ್ವಾನ ಇದೆ. ಇದಕ್ಕೆ ಬರೋಬ್ಬರಿ ೩೦ ವರ್ಷಗಳು ಅಂದರೆ ನೀವು ನಂಬಲೇ ಬೇಕು. ಈ ಮೂಲಕ ಅದು ಗಿನ್ನಿಸ್ ವಿಶ್ವ ದಾಖಲೆ ಬರೆದಿದೆ.
ಅಂದ ಹಾಗೆ ಇದು ಪೋರ್ಚ್ಗಲ್ನಲ್ಲಿರುವ ಶ್ವಾನ. ಈ ನಾಯಿಯ ಹೆಸರು ಬಾಬಿ. ರಾಫಿರೊ ಅಲೆಂಟೊ ಜಾತಿಗೆ ಸೇರಿದ್ದಾಗಿದೆ. 1992ರ ಮೇ 11ರಂದು ಇದು ಜನಿಸಿದೆ. ಈ ತಳಿಯ ಜೀವಿತಾವಧಿ 12ರಿಂದ 14 ವರ್ಷಗಳು ಎಂದು ಹೇಳುತ್ತಾರೆ. ಆದರೆ, ಪವಾಡ ಎಂಬಂತೆ ಬಾಬಿ 30 ವರ್ಷಕ್ಕೂ ಅಧಿಕ ಕಾಲ ಬದುಕಿದೆ ಅನ್ನೊದೇ ಅಚ್ಚರಿಯ ವಿಚಾರ.
ಒಂದು ವಾರದ ಹಿಂದೆ ಚುವಾವಾ ಜಾತಿಯ ನಾಯಿಯೊಂದು 23 ವರ್ಷ ಬದುಕುವ ಮೂಲಕ ವಿಶ್ವದ ಅತಿ ಹಿರಿಯ ನಾಯಿ ಎಂಬ ಗಿನ್ನಿಸ್ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಬಾಬಿ ಒಂದೇ ವರ್ಷದಲ್ಲಿ ಅಳಿಸಿ ಹಾಕಿದೆ. ಬಾಬಿಯ ಈ ಸಾಧನೆಗೆ ಶ್ವಾನ ಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.ನೂರ್ಕಾಲ ಬದುಕಿ ಬಾಳು ಎಂದು ಶುಭ ಹಾರೈಸಿದ್ದಾರೆ.ಗಿನ್ನಿಸ್ ವಿಶ್ವ ದಾಖಲೆಯ ಟ್ವಿಟ್ ಖಾತೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಬಂದಿವೆ.
ನಾಯಿಗಳನ್ನು ಮನೆ ಕಾಯುವುದಕ್ಕೆ ಸಾಕುವುದು ಸಹಜ. ಅದರ ಜತೆಗೆ ರಾಫಿರೊ ಅಲೆಂಟೊ ಜಾತಿಗೆ ಸೇರಿದ ನಾಯಿಗಳನ್ನು ಕುರಿ ಮಂದೆಯನ್ನು ಮಾಂಸ ಭಕ್ಷಕ ಪ್ರಾಣಿಗಳಿಂದ ಕಾಪಾಡಲು ಸಾಕಲಾಗುತ್ತದೆ.ಬಾಬಿ ಈ ಎಲ್ಲಾ ಕೆಲಸಗಳನ್ನು ನಿರ್ವಹಿಸಿ ಭೇಶ್ ಎನಿಸಿಕೊಂಡಿದ್ದಾಳೆ.ಈಕೆಯಂದ್ರೆ ಮನೆಯವರಿಗೂ ಪಂಚಪ್ರಾಣ.
ಬಾಬಿಯೂ ಕುರಿ ಮಂದೆಗಳ ಜತೆಯೇ ಬದುಕಿದ್ದು ಸಾವಿರಾರು ಕುರಿಗಳನ್ನು ಭಕ್ಷಕ ಪ್ರಾಣಿಗಳಿಂದ ರಕ್ಷಿಸಿದ್ದಾಳೆ.ಹೀಗಾಗಿ ದಿನನಿತ್ಯ ಬಾಬಿಗೆ ಇದೇ ಕೆಲಸ. ಆದರೆ, ಸುಸ್ತು ಇಲ್ಲದಂತೆ ಆರಾಮವಾಗಿರುವುದೇ ಇದರ ಪ್ಲಸ್ ಪಾಯಿಂಟ್.