ನ್ಯೂಸ್ ನಾಟೌಟ್: ಒಂದು ಕಾಡಾನೆ ಸೆರೆ ಹಿಡಿದ ಬಳಿಕ
ಉಳಿದ ಆನೆಗಳನ್ನು
ಸೆರೆ ಹಿಡಯುವಂತೆ ಆಗ್ರಹಿಸಿ ಸಾರ್ವಜನಿಕರು
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಈ ವೇಳೆ ಅರಣ್ಯ ಇಲಾಖೆ ಹಾಗೂ ಪೊಲೀಸ್
ಜೀಪ್ ಗೆ ಹಾನಿಗೈದಿರುವ ಘಟನೆ ವರದಿಯಾಗಿದೆ.
ನರಹಂತಕ ಆನೆಯನ್ನು ಸೆರೆ ಹಿಡಿದು
ಸ್ಥಳಾಂತರಿಸಿದ ನಂತರ ಕಾರ್ಯಾಚರಣೆ
ಮುಂದುವರಿಸುವುದಾಗಿ ಅಧಿಕಾರಿಗಳು
ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು ಎಂದು ತಿಳಿದು ಬಂದಿದೆ.
ಸಾರ್ವಜನಿಕರು ಇದಕ್ಕೆ ಒಪ್ಪಲಿಲ್ಲ.ಸ್ಥಳದಲ್ಲಿ ಚದುರಿಸಲು
ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ
ಎನ್ನಲಾಗಿದೆ. ಈ ವೇಳೆ ಯಾರೋ ಕಿಡಿಗೇಡಿಗಳು
ಇಲಾಖೆಯ ವಾಹನಗಳಿಗೆ ಹಾನಿ ಮಾಡಿ
ಅಧಿಕಾರಿಗಳಿಗೆ ಹಲ್ಲೆಗೈದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ
ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ
ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.