ನ್ಯೂಸ್ ನಾಟೌಟ್: ನೂತನ ಶಿಕ್ಷಣ ನೀತಿಯನ್ವಯ ಇನ್ನು ಮುಂದೆ ಮಗುವನ್ನು ಒಂದನೇ ತರಗತಿಗೆ ಸೇರಿಸಬೇಕಾದರೆ ಕಡ್ಡಾಯ ಆರು ವರ್ಷ ಆಗಲೇಬೇಕು ಎಂಬ ನಿಯಮವನ್ನು ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದೆ.
ಈ ನಿಯಮ 2025-26ರ ಸಾಲಿನಿಂದ ಜಾರಿಗೆ ಬರಲಿದ್ದು, 2023-24ರಲ್ಲೇ ಜಾರಿಗೊಳಿಸಲು ಚಿಂತಿಸಲಾಗಿತ್ತು. ಆದರೆ ಮಕ್ಕಳ ಪಾಲಕರ ವಿರೋಧದಿಂದ ಮುಂದೂಡಲಾಗಿತ್ತು. ಈ ಹಿಂದೆ ಐದು ವರ್ಷ ಹತ್ತು ತಿಂಗಳಾಗಿದ್ದರೆ ದಾಖಲು ಮಾಡಲಾಗುತ್ತಿತ್ತು. ಇದೀಗ ಕನಿಷ್ಠ ವಯೋಮಿತಿ ಜಾರಿಗೆ ಸೂಚನೆ ನೀಡಲಾಗಿದೆ.