ನ್ಯೂಸ್ನಾಟೌಟ್: ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭಯಾನಕ ಭೂಕಂಪನದ ಕೆಲವೊಂದು ದೃಶ್ಯಗಳನ್ನುಗಮನಿಸಿದರೆ ಒಂದು ಕ್ಷಣ ಎಂಥವರ ಮನಸ್ಸು ಕೂಡ ಕರಗುತ್ತದೆ.
ಭೂಕಂಪದ ನಂತರ ಅವಶೇಷಗಳಡಿ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ತಮ್ಮನ ತಲೆಯನ್ನು ರಕ್ಷಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಟ್ವಿಟರ್ನಲ್ಲಿ ಈ ಫೋಟೋವನ್ನು ಹಂಚಿಕೊಂಡಿರುವ ವಿಶ್ವಸಂಸ್ಥೆಯ ಪ್ರತಿನಿಧಿ ಮೊಹಮ್ಮದ್ ಸಫಾ, ಇಬ್ಬರೂ 17 ಗಂಟೆ ಅವಶೇಷಗಳಡಿಯಲ್ಲಿ ಸಿಲುಕಿದರೂ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇಂಥ ಸಂದರ್ಭದಲ್ಲೂ ತನ್ನ ತಮ್ಮನನ್ನು ರಕ್ಷಿಸುತ್ತಿರುವ ಬಾಲಕಿಯ ಕಾಳಜಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಪ್ರಕೃತಿಯ ಮುನಿಸಿಗೆ ಬೃಹತ್ ಕಟ್ಟಡಗಳು ಧರೆಗುರುಳುವ ದೃಶ್ಯ ಅದರಲ್ಲಿ ಸಿಲುಕಿರುವ ಜನರ ಗೋಳಾಟ ಕಿರುಚಾಟವನ್ನುಕೇಳಿದಾಗ ಕರುಳು ಹಿಂಡಿದಂತಾಗುತ್ತದೆ. ಟರ್ಕಿ ಮತ್ತು ಸಿರಿಯಾದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.