ನ್ಯೂಸ್ ನಾಟೌಟ್ : ಯುವಕ – ಯುವತಿಯರಲ್ಲಿಯೇ ವೃದ್ಧಾಪ್ಯದ ತೊಂದರೆಗಳು ಹೆಚ್ಚಾಗಿ ಇತ್ತೀಚೆಗೆ ಕಂಡುಬರುತ್ತವೆ, ಮತ್ತು ಕೆಲವು ಜನರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ನಡೆಯಲು ಕೂಡ ಕಷ್ಟ ಪಡುತ್ತಾರೆ, ಆದರೆ ೮೦ ರ ವಯಸ್ಸಿನಲ್ಲಿ ಪ್ಯಾರಾಗ್ಲೈಡಿಂಗ್ ( Paragliding) ಮಾಡುವ ವೀಡಿಯೋವನ್ನು ಸೆಲೀನಾ ಮೋಸೆಸ್ ಹಂಚಿಕೊಂಡಿದ್ದಾರೆ.
ಸೆಲೀನಾ ಮೋಸೆಸ್ ಅವರ ಅಜ್ಜಿ ಮಾಡಿದ್ದ ಪ್ಯಾರಾಗ್ಲೈಡಿಂಗ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದ್ದು, ಅನೇಕರು ಅವರ ಜೀವನೋತ್ಸಾಹ, ಹಠ ಕಂಡು ಭಾವುಕರಾಗಿದ್ದಾರೆ ಮತ್ತು ಅನೇಕರು ಸ್ಪೂರ್ತಿ ಪಡೆದಿದ್ದಾರೆ.
ಮೋಸೆಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಸುಮಾರು 4 ಮಿಲಿಯನ್ ಲೈಕ್ಗಳನ್ನು ಪಡೆದಿದೆ. ವೀಡಿಯೊದ ಶೀರ್ಷಿಕೆಯ ಪ್ರಕಾರ, ವೀಡಿಯೊ ಕ್ಲಿಪ್ ಹಳೆಯದಾಗಿದ್ದು , ಆ ಮಹಿಳೆ ಈಗ ಸಾವನ್ನಪ್ಪಿದ್ದಾರೆ.
https://www.instagram.com/reel/CnT5BspKG6F/?utm_source=ig_web_button_share_sheet
“ವಯಸ್ಸು ಕೇವಲ ಒಂದು ಸಂಖ್ಯೆ … ಮತ್ತು ನನ್ನ ಆಯಿ (ಅಜ್ಜಿ) ಇದನ್ನು ಸಾಬೀತುಪಡಿಸಿದ್ದರು… ನನ್ನ ಅಜ್ಜಿ 80 ವರ್ಷ ವಯಸ್ಸಿನವರಾಗಿದ್ದಾಗ ಈ ಸಾಹಸ ಮಾಡಿದ್ದಾಳೆ … ಬಹಳ ಸಮಯದ ನಂತರ ನನ್ನ ಗ್ಯಾಲರಿಯಲ್ಲಿ ಈ ವೀಡಿಯೊ ಸಿಕ್ಕಿದೆ ಮತ್ತು ಹಂಚಿಕೊಳ್ಳದಿರಲು ನನ್ನ ಮನಸ್ಸು ತಡೆಯಲಿಲ್ಲ ” ಎಂದು ಬರೆದುಕೊಂಡಿದ್ದಾರೆ. ಅವರು ನಮ್ಮಿಂದ ದೂರವಾಗಿ 7 ವರ್ಷಗಳು ಕಳೆದಿವೆ. ಆದರೆ ಅವಳು ನಮ್ಮಲ್ಲಿ ಬಿಟ್ಟು ಹೋದ ನೆನಪುಗಳು ಯಾವಾಗಲೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ … ಮಿಸ್ ಯು. ಲವ್ ಯೂ,” ಎಂದು ಭಾವುಕರಾಗಿ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.