ನ್ಯೂಸ್ ನಾಟೌಟ್: ನಾವು ತಿನ್ನುವುದಕ್ಕೆ ಮಜಾ ಮಾಡುವುದಕ್ಕೆ ಎಷ್ಟು ಬೇಕಾದರೂ ಖರ್ಚು ಮಾಡುತ್ತೇವೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಪ್ರೀತಿಯ ಸಾಕು ಬೆಕ್ಕಿಗಾಗಿ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.
ಈಕೆಯ ಹೆಸರು ಅಭಿಗಲಿ ಲಕೆರ್. 23 ವರ್ಷ. ಈಕೆ ಕಳೆದ ವರ್ಷ ಒಂದು ಮುದ್ದಾದ ಬ್ಲ್ಯಾಕ್ ಬೆಕ್ಕನ್ನು ತಂದು ಸಾಕಲು ಆರಂಭಿಸಿದ್ದಳು. ಇದರಕ್ಕೆ ಮೋಸ್ ಎಂದು ಹೆಸರಿಟ್ಟಿದ್ದಳು. ಆದರೆ ಬೆಕ್ಕಿಗೆ ಇತ್ತೀಚಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಬದುಕುವುದೇ ಕಷ್ಟ ಎಂದು ಅದನ್ನು ಪ್ರಾಣಿಗಳ ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದಕ್ಕೆ ನಿರ್ಧರಿಸಲಾಯಿತು. ಆದರೆ ವಿಚಿತ್ರ ಉಸಿರಾಟದ ಸಮಸ್ಯೆಯನ್ನು ಏನೆಂದು ತಿಳಿಯುವುದಕ್ಕೆ ವೈದ್ಯರಿಗೆ ಹಲವು ಸಮಯಗಳೇ ಬೇಕಾಯಿತು. ಇದೀಗ ಒಂದು ಎರಡು ಎಂದು ಮೇಲಿಂದ ಮೇಲೆ ಖರ್ಚಾಗಿ ಒಟ್ಟು 7 ಲಕ್ಷ ರೂ. ಖರ್ಚಾಗಿದೆ ಎಂದು ಬೆಕ್ಕಿನ ಮಾಲೀಕರಾದ ಅಭಿಗಲಿ ತಿಳಿಸಿದ್ದಾರೆ. ಸದ್ಯ ಅದರ ಸ್ಥಿತಿ ಇದ್ದಂತೆ ಇದೆ. ಆದರೆ ಇದು ಆ ಬೆಕ್ಕಿಗೆ ನಾರ್ಮಲ್ ಆಗಿರುವ ವರ್ತನೆ ಎಂದು ಕಾಣುತ್ತದೆ ಎನ್ನುವುದನ್ನು ಸ್ವತಃ ಅಭಿಗಲಿ ಲಕೆರ್ ತಿಳಿಸುವ ಮೂಲಕ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ಗಾದೆ ಮಾತು ನಿಜ ಅನ್ನುವಂತೆ ವರ್ತಿಸಿದ್ದಾಳೆ.