ನ್ಯೂಸ್ ನಾಟೌಟ್ :ಗ್ರಾಹಕರ ಸೋಗಿನಲ್ಲಿ ಬಂದು ಬಟ್ಟೆ ಕಳವುಗೈದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.ಅಪರಿಚಿತ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದು,ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ಸೆರೆ:
ಪುತ್ತೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಬಟ್ಟೆ ಮಳಿಗೆಯೊಂದಕ್ಕೆ ಮಹಿಳೆಯೊಬ್ಬರು ಬಂದಿದ್ದಾರೆ.ಗ್ರಾಹಕರ ಸೋಗಿನಲ್ಲಿ ಬಂದು ಸಿಬ್ಬಂದಿಗಳ ಗಮನವನ್ನು ಬೇರೆಡೆಗೆ ಸೆಳೆದು ಬಟ್ಟೆಯನ್ನು ಬ್ಯಾಗ್ ನಲ್ಲಿ ತುಂಬಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆದರೆ ಎಷ್ಟು ಮೌಲ್ಯದ ಬಟ್ಟೆಗಳನ್ನು ತುಂಬಿಸಿದ್ದಾರೆ,ಯಾರು ಈ ಮಹಿಳೆ,ಎಲ್ಲಿಯವರು ಎಂಬುದು ಗೊತ್ತಾಗಿಲ್ಲ.ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.