ನ್ಯೂಸ್ ನಾಟೌಟ್ : ಪ್ರೀತಿ ಕುರುಡು ಅಂತಾರೆ, ಆದರೆ ಅದು ಎಲ್ಲರ ಜೀವನದಲ್ಲಿ ನಿಜವಲ್ಲ, ಜಾತಿ, ಮತಗಳ ನಡುವೆ ಹೊಡೆದಾಡುವ ಜನರ ನಡುವೆ, ಕೇವಲ ಜಾತಿ ಮತವಲ್ಲದೆ ದೇಶದ ಗಡಿಯೂ ಮೀರಿ ಪ್ರೀತಿ ಹುಟ್ಟಬಲ್ಲದು ಎಂಬುದಕ್ಕೆ ಉತ್ತರ ಪ್ರದೇಶದ ಜೋಡಿಯೊಂದು ಉತ್ತಮ ಉದಾಹರಣೆ.
ಪವನ್ ಉತ್ತರ ಪ್ರದೇಶದ ಇಟಾಹ್ ನಿವಾಸಿ. ಕ್ರಿಸ್ಟನ್ ಪವನ್ನನ್ನು ಮದುವೆಯಾಗಲು ಸುಮಾರು 6,000 ಕಿ.ಮೀ ದೂರವನ್ನು ದಿಂದ ಬಂದಿದ್ದಾರೆ.
ಹಾಗಂತ ಇವರಿಬ್ಬರು ಕ್ಲಾಸ್ಮೇಟ್ ಅಥವಾ ಒಂದೇ ಕಂಪನಿಯ ಉದ್ಯೋಗಿಗಳು, ಸಂಬಂಧಿಕರೇನೂ ಅಲ್ಲ, ಬದಲಿಗೆ ಪ್ರೇಸ್ ಬುಕ್ ಪ್ರೇಮಿಗಳು. ಫೇಸ್ಬುಕ್ನಲ್ಲಿ ಚಾಟ್ ಮಾಡಿ ಪರಿಚಯವಾದ ಭಾರತದ ಯುವಕನನ್ನು, ಸ್ವೀಡನ್ನ ಕುವರಿ ಪ್ರೀತಿಸಿ ಅಲ್ಲಿಂದ ಭಾರತಕ್ಕೆ ಬಂದು ಆತನನ್ನು ವರಿಸಿದ್ದಾರೆ.
ಕ್ರಿಸ್ಟನ್ ಲಿಬರ್ಟ್ ಎನ್ನುವ ಸ್ವೀಡನ್ನ ಯುವತಿ, ಫೇಸ್ಬುಕ್ನಲ್ಲಿ ಪರಿಚಯವಾದ ಉತ್ತರ ಪ್ರದೇಶದ ಪವನ್ ಕುಮಾರ್ರನ್ನು ಪ್ರೀತಿಸಿದ್ದರು. 2012ರಲ್ಲಿ ಫೇಸ್ ಬುಕ್ ಫ್ರೆಂಡ್ ಆಗಿ ಪರಿಚಯವಾಗಿದ್ದ ಈ ಜೋಡಿ ಈಗ ಮದುವೆಯಾಗಿದ್ದಾರೆ. ತನ್ನ ಪ್ರೇಮಿಗಾಗಿ ಸ್ವೀಡನ್ನಿಂದ ಬಂದಿರುವ ಕ್ರಿಸ್ಟನ್, ಹಿಂದೂ ಸಂಪ್ರದಾಯದಂತೆ ಪವನ್ ಅವರನ್ನು ಮದುವೆಯಾಗಿದ್ದಾರೆ. ಮದುವೆಗೆ ವರನ ಕುಟುಂಬವೂ ಒಪ್ಪಿದ್ದು, ಮಕ್ಕಳ ಖುಷಿಯೇ ನಮ್ಮ ಖುಷಿ ಎಂದಿದ್ದಾರೆ.
ಪವನ್ ಹಾಗೂ ಕ್ರಿಸ್ಟನ್ ಅವರ ಮದುವೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಶುಭಹಾರೈಸಿದ್ದಾರೆ.