ನ್ಯೂಸ್ ನಾಟೌಟ್: ನೋಟ್ ಬ್ಯಾನ್ ಮಾಡಿದ್ದ ವಿಚಾರ ಹಲವಾರು ಚರ್ಚೆಗೆ ಕಾರಣವಾಗಿತ್ತು. ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ಮೋದಿ ನಡೆಯನ್ನು ಟೀಕಿಸಿದ್ದರು. ಮತ್ತೂ ಕೆಲವರು ಮೋದಿ ನಿರ್ಧಾರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗೆ ಮೆಟ್ಟಿಲೇರಿದ್ದ ಎಲ್ಲ 58 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ಮೂಲಕ ನೋಟ್ ಬ್ಯಾನ್ ಕ್ರಮ ಸರಿಯಾಗಿದೆ ಎಂದು ಸುಪ್ರೀಂ ತಿಳಿಸಿದೆ.
ನವೆಂಬರ್ 2016ರಂದು ಕೇಂದ್ರ ಸರಕಾರವು 1,000 ಹಾಗೂ 500 ರೂ. ಮುಖ ಬೆಲೆಯ ನೋಟ್ಗಳನ್ನು ಬ್ಯಾನ್ ಮಾಡಿತ್ತು. ಈ ಬೆನ್ನಲ್ಲೇ ಕೋಟ್ಯಂತರ ರೂ. ಹಣವನ್ನು ತೆರಿಗೆ ವಂಚಿಸಿ ಅಕ್ರಮವಾಗಿ ಬಚ್ಚಿಟ್ಟಿದ್ದವರೆಲ್ಲ ಬೆಚ್ಚಿ ಬಿದ್ದಿದ್ದರು. ಈ ಬೆನ್ನಲ್ಲೇ ಮೋದಿ ಮಾಡಿದ್ದು ಯಾವುದು ಸರಿ ಇಲ್ಲ ಎಂದು ಕೆಲವಷ್ಟು ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದೀಗ ಕೇಂದ್ರ ಸರಕಾರ ದೊಡ್ಡ ತಲೆಬಿಸಿಯಿಂದ ಪಾರಾದಂತಾಗಿದೆ.