ನ್ಯೂಸ್ ನಾಟೌಟ್ : ಸುಳ್ಯ ನಗರದ ದೇವಸ್ಯದಲ್ಲಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ಗಬ್ಬು ವಾಸನೆ ಬರುತ್ತಿದೆ.ಇದರಿಂದ ವಾಹನ ಸವಾರರು,ಪಾದಚಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೊಳ್ಳೆ ಉತ್ಪತ್ತಿ ತಾಣ:
ಕಾಂಕ್ರೀಟ್ ರಸ್ತೆಯಲ್ಲಿ ಮೇಲಿನ ರಸ್ತೆಯಿಂದ ಹರಿಯುತ್ತಿರುವ ಕೊಳಚೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಸಮಸ್ಯೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ನೀರು ಅಲ್ಲಲ್ಲಿ ನಿಂತಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿದೆ.ಸಮೀಪದ ಮನೆಗಳಿಗಂತು ಆರೋಗ್ಯ ಹದಗೆಡುವ ಭಯ ಶುರುವಾಗಿದೆ. ಈಗ ಚಳಿ ಸಮಯ.ಶೀತ,ಕೆಮ್ಮು,ಜ್ವರ ಪುಟ್ಟ ಮಕ್ಕಳನ್ನು ಕಾಡುತ್ತಿದೆ.ಮಕ್ಕಳು ಅತ್ತಿಂದಿತ್ತ ಓಡಾಡುವುದರಿಂದ ರೋಗಗಳು ಆವರಿಸಿಕೊಳ್ಳುವ ಸಂಭವನೀಯತೆ ಹೆಚ್ಚಿದೆ.ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕಾಗಿದೆ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಿ ಮುಂದೆ ಆಗಬಹುದಾದ ತೊಂದರೆಯನ್ನು ತಪ್ಪಿಸಬೇಕೆಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.