ನ್ಯೂಸ್ ನಾಟೌಟ್: ಇತ್ತೀಚೆಗೆ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚುತ್ತಿದೆ. ಸುಳ್ಯದಲ್ಲಿ ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ. ರಿಕ್ಷಾವೊಂದಕ್ಕೆ ಪೈಚಾರ್ ಬಳಿ ಪಿಕಪ್ ವಾಹನವೊಂದು ಗುದ್ದಿದೆ.
ಪರಿಣಾಮ ರಿಕ್ಷಾ ಹಿಂದಿನ ಭಾಗ ಹಾಗೂ ಮುಂದಿನ ಭಾಗ ಜಖಂಗೊಂಡಿದೆ. ಆದರೆ ಕನಿಷ್ಠ ಮಾನವೀಯತೆಯನ್ನೂ ತೋರಿಸದೆ ಪಿಕಪ್ ಚಾಲಕ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ. ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಇನ್ನಷ್ಟೇ ಪೊಲೀಸರ ಆಗಮನವಾಗಬೇಕಿದೆ.