ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ದ ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರಾ ಸಂಭ್ರಮ ಅದ್ದೂರಿಯಾಗಿ ನಡೆಯುತ್ತಿದೆ.ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಜಾತ್ರೋತ್ಸವ ಪ್ರಯುಕ್ತ ವಿಶೇಷವಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತಿದೆ.
ಹಸಿರುವಾಣಿ ಮೆರವಣಿಗೆ:
ಇಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವಕ್ಕೆ ಕೆವಿಜಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಡಾ. ರೇಣುಕಾಪ್ರಸಾದ್ ಕೆ.ವಿ ಅವರು ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ದೇವಸ್ಥಾನಕ್ಕೆ ಹಸಿರುವಾಣಿ ಸಮರ್ಪಣೆ ಮಾಡಿದರು.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗೂ ಕೆವಿಜಿ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರ ನೇತೃತ್ವದಲ್ಲಿ ಸುಳ್ಯ ನಗರದಲ್ಲಿ ಹಸಿರುವಾಣಿ ಮೆರವಣಿಗೆ ನಡೆಯಿತು.
ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಊರುಬೈಲು, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುರೇಶ್.ವಿ, ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಯಪ್ರಕಾಶ್ , ಐಟಿಐ ಪ್ರಾಂಶುಪಾಲ ಚಿದಾನಂದ ಬಾಳಿಲ, ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧಾ ರಾಮಚಂದ್ರ , ಭಾಗಮಂಡಲ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಕುಡೆಕಲ್ಲು, ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಶ್ರೀಧರ ಎಂ. ಕೆ, ಸೂಪರಿಂಡೆಂಟ್ ಶಿವರಾಮ ಕೇರ್ಪಳ, ಕೆವಿಜಿ ದಂತ ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಬಿ.ಟಿ. ಮಾಧವ, ಆಡಳಿತ ಕಚೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ , ಐಟಿಐ ಸೂಪರಿಂಡೆಂಟ್ ಭವಾನಿಶಂಕರ ಅಡ್ತಲೆ, ಡಾ. ಮನೋಜ್ , ಅನಿಲ್ .ಬಿ.ವಿ, ಕಮಲಾಕ್ಷ ನಂಗಾರು, ದಯಾನಂದ ಅಟ್ಲೂರ್ , ರಾಜೇಶ್ ಕೊಲ್ಲಮೊಗ್ರ, ಆನಂದ ಕುಡೆಂಬಿ , ವಸಂತ ಕಿರಿ ಭಾಗ, ಧನಂಜಯ ಕಲ್ಲುಗದ್ದೆ, ನ.ಪಂ. ಮಾಜಿ ಸದಸ್ಯ ಗರೀಶ್ ಕಲ್ಲುಗದ್ದೆ ಹಾಗೂ ಹಲವರು ಉಪಸ್ಥಿತರಿದ್ದರು.
ಮೆರವಣಿಗೆಯ ಬಳಿಕ ದೇವಾಲಯಕ್ಕೆ ಹಸಿರುವಾಣಿಯನ್ನು ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಉಜ್ವಲ್ ಊರುಬೈಲು ಹಾಗೂ ಹಲವರು ಹಸಿರುವಾಣಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದರು. ಪ್ರಮುಖರಾದ ಎನ್.ಎ . ರಾಮಚಂದ್ರ , ಭರತ್ ಮುಂಡೋಡಿ, ಸಂತೋಷ್ ಕುತ್ತಮೊಟ್ಟೆ, ಜಯಪ್ರಕಾಶ್ ಕುಂಚಡ್ಕ, ಬಾಲಗೋಪಾಲ ಸೇರ್ಕಜೆ, ಪಿ.ಎಸ್ . ಗಂಗಾಧರ, ಎಸ್. ಆರ್ . ಸೂರಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.