ನ್ಯೂಸ್ ನಾಟೌಟ್ : ಬಿಜೆಪಿ ಕಾರ್ಯಕರ್ತ, ಬಜರಂಗದಳದ ಸಕ್ರಿಯ ಸದಸ್ಯನೊಬ್ಬ ಹುಡುಗಿ ಜತೆ ಪ್ರೀತಿಸುವ ನಾಟಕವಾಗಿ, ವಂಚಿಸಿದ್ದು ಮಾತ್ರವಲ್ಲದೇ ಕಿರುಕುಳ ನೀಡುತ್ತಿದ್ದ ಎಂದು ಡೆತ್ನೋಟ್ ಬರೆದಿಟ್ಟು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ನಿನ್ನೆ ಬೆಳಕಿಗೆ ಬಂದಿತ್ತು.ಇದೀಗ ಆರೋಪಿ ನಿತೇಶ್ ಗೆ ಸಂಘಟನೆಯು ಸರಿಯಾಗಿ ಪಾಠ ಕಲಿಸಿದೆ.ಸಂಘಟನೆಯ ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣ ಸಂಘಟನೆಯಿಂದ ಹೊರಗಿಟ್ಟಿದೆ ಹೇಳಿಕೊಂಡ ಪೋಸ್ಟ್ ವೊಂದು ವೈರಲ್ ಆಗಿದೆ.
ಬಜರಂಗದಳದಿಂದ ಗೇಟ್ ಪಾಸ್ :
17 ವರ್ಷದ ಕಾಲೇಜು ವಿದ್ಯಾರ್ಥಿನಿ ದೀಪ್ತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಕಳೆದ ೪ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಜೀವನ್ಮರಣ ಹೋರಾಟದಲ್ಲಿದ್ದ ದೀಪ್ತಿ ಚಿಕಿತ್ಸೆ ಫಲಕಾರಿಯಾಗದೇ ಜ.14ರಂದು ಮೃತಪಟ್ಟಿದ್ದಳು. ಸಾವಿನ ಕೊನೆಯ ಕ್ಷಣದಲ್ಲಿ ಡೆತ್ನೋಟ್ ಬರೆದಿಟ್ಟಿದ್ದ ಬಾಲಕಿ, ತನ್ನ ಸಾವಿಗೆ 25 ವರ್ಷದ ನಿತೇಶ್ ಕಾರಣ ಎಂದು ತಿಳಿಸಿದ್ದಾಳೆ. ಡೆತ್ ನೋಟ್ ಪತ್ತೆಯಾಗುತ್ತಿದ್ದಂತೆ ಈ ಸುದ್ದಿ ಎಲ್ಲೆಡೆ ಹರಡಿತ್ತು.ಇದರಿಂದ ಎಚ್ಚೆತ್ತ ಬಜರಂಗದಳವು, ನಿತೇಶ್ಗೂ ಬಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ.ಸಂಯೋಜಕ ನಿತೇಶ್ ಅವರನ್ನು ಬಜರಂಗದಳದಿಂದ ಹೊರಗಿಡಲಾಗಿದೆ ಎಂದು ಹೇಳಿದೆ.
ಡೆತ್ ನೋಟ್ ಹೇಳಿದ ಸಾಕ್ಷಿ:
25 ವರ್ಷದ ನಿತೇಶ್ 17 ವರ್ಷದ ದೀಪ್ತಿಯನ್ನು ಪ್ರೀತಿಸುವ ನಾಟಕವಾಗಿ, ವಂಚಿಸಿದ್ದ. ಅಲ್ಲದೆ, ಕಿರುಕುಳ ನೀಡುತ್ತಿದ್ದ ಎನ್ನಲಾಗಿತ್ತು. ಈಕೆ ಜನವರಿ 10ರಂದು ಕಳೆ ನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಆಕೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜನವರಿ 14ರಂದು ಮೃತಪಟ್ಟಿದ್ದಾಳೆ.ಸಾಯುವ ಕೊನೆಯ ಕ್ಷಣದಲ್ಲಿ ಡೆತ್ನೋಟ್ ಬರೆದಿಟ್ಟಿದ್ದಳು.
ನಿತೇಶ್ ವಿರುದ್ದ ಪ್ರಕರಣ :
ಡೆತ್ನೋಟ್ನಲ್ಲಿ ಹೆಸರಿಸಿದಂತೆ, ಬಿಜೆಪಿ ಕಾರ್ಯಕರ್ತ ಎನ್ನಲಾದ ನಿತೇಶ್ ವಿರುದ್ಧ ದೂರು ದಾಖಲಿಸಲು ಕುದುರೆಮುಖ ಪೊಲೀಸರು ಸತಾಯಿಸುತ್ತಿದ್ದರು. ಹುಡುಗಿಯ ಪೋಷಕರು ನೀಡಿದ ದೂರನ್ನು ಸ್ವೀಕರಿಸದ ಕುದುರೆಮುಖ ಪೊಲೀಸರನ್ನು ಚಿಕ್ಕಮಗಳೂರು ಎಸ್ಪಿ ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಪಿ ಸೂಚನೆ ಬಳಿಕ ನಿತೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.