ನ್ಯೂಸ್ ನಾಟೌಟ್ :ಸುದ್ದಿ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ ನೂತನ ಸುಳ್ಯ ಶಾಖೆಯ ಉದ್ಘಾಟನೆ ಹಾಗೂ ಸುದ್ದಿ ಕೃಷಿ ಸೇವಾ ಕೇಂದ್ರದ ಕಚೇರಿ ಉದ್ಘಾಟನೆ ಜ. 29 ರಂದು ಪೂರ್ವಾಹ್ನ ಗಂಟೆ 10.30ಕ್ಕೆ ಸುಳ್ಯದ ದ್ವಾರಕಾ ಹೋಟೆಲ್ ಬಳಿಯ ರಾಜಶ್ರೀ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಜ.28 ರಂದು ಬೆಳಿಗ್ಗೆ ಸಂಸ್ಥೆಯ ನೂತನ ಕಚೇರಿಯಲ್ಲಿ ಗಣಪತಿ ಹವನ ನಡೆಯಲಿದೆ. ಎಂದು ಸಹಕಾರಿ ಸಂಘದ ಅದ್ಯಕ್ಷ ಡಾ.ಯು ಪಿ ಶಿವಾನಂದ ಹೇಳಿದ್ದಾರೆ,ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯಾರೆಲ್ಲ ಇರಲಿದ್ದಾರೆ?
ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಸುದ್ದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ.ಯು.ಪಿ. ಶಿವಾನಂದ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ. ಲಾಕರ್ ಉದ್ಘಾಟಿಸಲಿದ್ದು,ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈ ಠೇವಣಿ ಪತ್ರ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಆಗಮಿಸಲಿದ್ದಾರೆ.ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸಾಲಪತ್ರ ವಿತರಣೆ ಮಾಡಲಿದ್ದಾರೆ ಎಂದರು. ಈ ಸಂದರ್ಭ ಟಿಎಪಿಸಿಎಂಎಸ್ ಸುಳ್ಯ ಮತ್ತು ಗುತ್ತಿಗಾರು ರಬ್ಬರ್ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಸೌಹಾರ್ದ ಸಂಯುಕ್ತ ಸಹಕಾರಿ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ. ಜಯರಾಮ, ಕರ್ನಾಟಕ ರಾಜ್ಯ ನಿ. ಮಂಗಳೂರು ಇದರ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಸುಳ್ಯ ರಾಜಶ್ರೀ ಕಾಂಪ್ಲೆಕ್ಸ್ ಮಾಲಕ, ಇಂಜಿನಿಯರ್ ಕೃಷ್ಣ ರಾವ್ ಉಪಸ್ಥಿತರಿರುವರು ಎಂದು ಡಾ.ಯು ಪಿ ಶಿವಾನಂದ ಹೇಳಿದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ:
ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ಹಾಗೂ ತ್ವರಿತವಾಗಿ ಕ್ಲಪ್ತ ಸಮಯದಲ್ಲಿ ನೀಡಲಾಗುವುದು.ವಾರ್ಷಿಕ 33.75 ಕೋಟಿಗೂ ಮಿಕ್ಕಿ ವ್ಯವಹಾರ, ಇ-ಸ್ಟಾಂಪಿಂಗ್ ಸೇವಾ ಸೌಲಭ್ಯವಿದೆ.೨೦೨೧-೨೦೨೨
ಸಾಲಿನಲ್ಲಿ ರೂ.32.37 ಲಕ ಲಾಭ ಗಳಿಸಿದೆ ಎಂದರು, ಅಲ್ಲದೆ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಸ್ಕಾಲರ್ ಶಿಫ್, ಸಂಘದ ಸದಸ್ಯರಾಗಿದ್ದು, ಬಡವರಾಗಿರುವ ಸದಸ್ಯರಿಗೆ ಸಹಾಯಧನ ಮತ್ತು ಸ್ಕಾಲರ್ ಶಿಫ್ ನೀಡುವುದರ ಮೂಲಕ ವಿಶೇಷ ಮುತುರ್ವಜಿ ವಹಿಸಲಾಗಿದೆ.ಕೃಷಿಕರ ಅಭ್ಯುದವೇ ನಮ್ಮ ಸಂಘದ ಮೂಲ ದ್ಯೇಯ, ಮುಂದೆ ಶೀಘ್ರವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಮುಂದಿನ ಶಾಖೆ ತೆರೆಯಲಾಗುವುದು ಎಂದು ಯು.ಪಿ.ಶಿವಾನಂದ ಅವರು ಹೇಳಿದರು.
ಸುದ್ದೀಗೋಷ್ಟಿಯಲ್ಲಿ ಸಂಘದ ನಿರ್ದೇಶಕರಾದ ಹರೀಶ್ ಬಂಟ್ವಾಳ್, ಈಶ್ವರ್ ವಾರಣಾಶಿ, ಸುದ್ದಿ ಪತ್ರಿಕಾ ಕಚೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಂ ನರೇಂದ್ರ, ಸುಳ್ಯ ಶಾಖೆಯ ವ್ಯವಸ್ಥಾಪಕ ಚೇತನ್ ಬುಡ್ಲೆಗುತ್ತು ಮೊದಲಾದವರಿದ್ದರು.
ReplyForward |