ನ್ಯೂಸ್ ನಾಟೌಟ್ : ಕಳೆದ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ಕಾಂಗ್ರೆಸ್ ನಾಯಕ ಸುಧೀರ್ ರೈ ಮೇನಾಲ(48 ವರ್ಷ) ಅವರು ಇಂದು ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯರಾಗಿದ್ದರು. ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚಿಕಿತ್ಸೆ ಸ್ಪಂದಿಸದೆ ಸಾವು:
ಕಳೆದ ಮೂರು ದಿನಗಳ ಹಿಂದೆ ಅಜ್ಜಾವರ ತೆರಳುವ ಮಾರ್ಗ ಮಧ್ಯೆ ವಿಷ ಸೇವನೆ ಮಾಡಿ ಮನೆಗೆ ಹೋಗಿದ್ದರು.ವಿಷ ಸೇವಿಸಿದ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆ ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಳೆದೆರಡು ದಿನಗಳಿಂದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು.
ಸುಳ್ಯದ ಸಕ್ರೀಯ ನಾಯಕ:
ಸುಳ್ಯದ ಮಟ್ಟಿಗೆ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ರಾಜಕೀಯ ಸೇರಿದಂತೆ ಸುಧೀರ್ ರೈಯವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹೆಸರು ಗಳಿಸಿದ್ದರು.ಪಕ್ಷಾತೀತವಾಗಿ ಅಪಾರ ಸ್ನೇಹಿತವರ್ಗವನ್ನೇ ಹೊಂದಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ ಪುತ್ರ, ಕುಟುಂಬಸ್ಥರನ್ನು ಅಗಲಿದ್ದಾರೆ.