ನ್ಯೂಸ್ ನಾಟೌಟ್ : ಮದುವೆ ಆಗುವುದಕ್ಕೆ ಕಾಲ ಕೂಡಿ ಬರಬೇಕು, ಅದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಅಂತಾರೆ.ಆದರೆ ಹುಡುಗನಿಗೆ ಹುಡುಗಿ ಸಿಗಬೇಕಾದರೆ,ಅಥವಾ ಹುಡುಗಿಗೆ ಹುಡುಗ ಸಿಗಬೇಕಾದರೆ ಕಾಲ ಕೂಡಿ ಬರಬೇಕು ಎಂದು ಹೇಳುವುದು ರೂಢಿ.ಕೆಲವೊಂದು ಬಾರಿ ಹುಡುಕಾಡಿದರೂ ಹುಡುಗ,ಹುಡುಗಿಗೆ ಮದುವೆಯೇ ಫಿಕ್ಸ್ ಆಗುವುದಿಲ್ಲ.ಅಂತಹ ಸಾಲಿಗೆ ಇಲ್ಲೊಬ್ಬ 3 ಅಡಿ ಉದ್ದದ ವ್ಯಕ್ತಿ ಸೇರ್ಕೊಂಡಿದ್ದ.ಅದಕ್ಕೆ ಆತ ಮದುವೆ ಆಗೋಕೆ ಹುಡುಗಿನೇ ಸಿಗ್ತ ಇಲ್ಲಾ ಎಂದು ಡೈರೆಕ್ಟ್ ಆಗಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಬಳಿಕ ಮುಖ್ಯಮಂತ್ರಿ ಜತೆಯೂ ತನ್ನ ಸಮಸ್ಯೆ ಹೇಳಿಕೊಂಡಿದ್ದ.ಇದೀಗ ಆತನ ಅದೃಷ್ಟ ಖುಲಾಯಿಸಿದೆ.ಆತನಿಗೆ ಮದುವೆಯಾಗಿದೆ.
ಸೋಶಿಯಲ್ ಮೀಡಿಯಾ ಪವರ್!:
ಈತ ಮೂಲತಃ ಉತ್ತರ ಪ್ರದೇಶದ ಶಾಮ್ಲಿಯ ಕೈರಾನಾದ ವ್ಯಕ್ತಿ ಲಿಟಲ್ ಸ್ಟಾರ್ ಅಜೀಂ ಮನ್ಸೂರಿ ಇವರು ಕಳೆದ ಹಲವು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಾ ಇದ್ದರು. ಕೇವಲ ಎರಡೂವರೆ ಅಡಿ ಎತ್ತರವಿದ್ದ ಅಜೀಂ ಎತ್ತರ ಕಡಿಮೆ ಇದ್ದ ಕಾರಣ ಹುಡುಗಿನೇ ಸಿಗಲಿಲ್ಲ. ಇವರು ಮುಖ್ಯಮಂತ್ರಿ ಜೊತೆ ಹೇಳಿಕೊಂಡಾಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಕೇಳಿದರು ಎಂದು ಹೇಳಲಾಗಿದೆ.
ಮಾಧ್ಯಮಗಳಲ್ಲಿ ಚರ್ಚೆಯಾಯ್ತು. ನಂತರ ಇದನ್ನು ನೋಡಿದ ಹಪುದ್ ನ ಹುಡುಗಿಯು ಈತ ಇದ್ದ ಸ್ಥಳಕ್ಕೆ ಆಗಮಿಸಿದಳು. ಕಳೆದ ವರ್ಷ ಇಬ್ಬರು ಭೇಟಿಯಾದರು ಮತ್ತು ಹುಡುಗಿಯ ಕಾಯುವಿಕೆ ಕೊನೆಗೊಂಡಿತು. ಕೊನೆಗೂ ಅಜೀಮ್ ಹಾಗೂ ಬುಶ್ರಾ ನ. 2, 2022 ರಲ್ಲಿ ವಿವಾಹವಾಗಿದ್ದರು. ಆದರೆ ಈ ವ್ಯಕ್ತಿ ಕುಳ್ಳವಾಗಿದ್ದ ಕಾರಣ ಹುಡುಗಿ ಸಿಕ್ಕಿರಲಿಲ್ಲ. ಇದೀಗ ಈತನ ಜೀವನದಲ್ಲಿ ಇದೊಂದು ದೊಡ್ಡ ಸಂಗತಿಯಾಗಿದೆ. ಇಬ್ಬರ ಎತ್ತರವು ಸಮವಾದ ಕಾರಣ ,ಆತನ ಎತ್ತರಕ್ಕೆ ಈಕೆ ಸರಿ ಹೊಂದುತ್ತಾಳೆ.ಈ ಸುದ್ದಿ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದ್ದು, ಇವರ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.