ನ್ಯೂಸ್ ನಾಟೌಟ್ : ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಷಬ್ ಪಂತ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.ಕಾರು ಸಂಪೂರ್ಣ ಸುಟ್ಟು ಹೋಗಿದ್ದು,ರಿಷಬ್ ಪಂತ್ ಬದುಕುಳಿದಿದ್ದೇ ಪವಾಡವೆಂದು ಅಭಿಪ್ರಾಯಪಡುತ್ತಿದ್ದಾರೆ.ಈ ಅಪಘಾತದ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿತ್ತು. ರಿಷಬ್ ಪಂತ್ ಅವರು ಡ್ರೈವಿಂಗ್ ಮಾಡುತ್ತಿದ್ದಾಗ ಕುಡಿದಿದ್ದರು.ಕುಡಿದು ಡ್ರೈವಿಂಗ್ ಮಾಡಿದ್ದಾರೆ ಅನ್ನುವ ಊಹಾಪೋಹ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.
ಹಾಗಾದರೆ ಅವರ ಕಾರು ಅಪಘಾತವಾಗಲು ಕಾರಣವೇನು? ರಸ್ತೆ ಗುಂಡಿಯಿಂದ ತಪ್ಪಿಸಿಕೊಳ್ಳಲು ನೋಡಿದ್ದೇ, ಪಂತ್ ಕಾರ್ ಅಪಘಾತವಾಗಲು ಕಾರಣವಾಯಿತಾ? ಹೌದು,ಹೀಗಂತ ದೆಹಲಿ ಆ್ಯಂಡ್ ಡಿಸ್ಟ್ರಿಕ್ ಅಸೋಸಿಯೇಷನ್ ಡೈರೆಕ್ಟರ್ ಶ್ಯಾಮ್ ಶರ್ಮಾ ಹೇಳಿದ್ದಾರೆ.ಅಪಘಾತಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಈ ಕುರಿತು ಪಂತ್ ನನ್ನ ಬಳಿ ಹೇಳಿಕೊಂಡಿದ್ದರೆಂದು ಶ್ಯಾಮ್ ಶರ್ಮಾ ತಿಳಿಸಿದ್ದಾರೆ.ಅಲ್ಲದೇ, ಪಂತ್ ಆರೋಗ್ಯ ದಲ್ಲಿ ಯಾವುದೇ ಆತಂಕ ಇಲ್ಲ ಅಂತ ಅವರು ಮಾಹಿತಿ ನೀಡಿದ್ದಾರೆ.
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ವೇಗವಾಗಿ ಬಂದ ಪಂತ್ ಕಾರು ಅಪಘಾತಕ್ಕೀಡಾದ ದೃಶ್ಯವನ್ನು ಹರಿಯಾಣ ರೋಡ್ವೇಸ್ ಬಸ್ನ ಡ್ರೈವರ್ ಮತ್ತು ಕಂಡಕ್ಟರ್ ಗಮನಿಸಿದ್ದಾರೆ. ಹಾಗೂ ಕೂಡಲೇ ತಾವಿದ್ದ ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ರಿಷಭ್ ಪಂತ್ರನ್ನು ಕಾಪಾಡಲು ಮುಂದಾಗಿದ್ದಾರೆ. ಅವರು ಸ್ಥಳಕ್ಕೆ ಬರುವಷ್ಟರಲ್ಲೇ, ಗಾಯಗೊಂಡಿದ್ದ ಪಂತ್ ಕಾರಿನಿಂದ ಹೊರಗೆ ಬರಲು ಯತ್ನಿಸಿದ್ರು.ಬಳಿಕ
ಕಂಡಕ್ಟರ್, ಡ್ರೈವರ್ ಪಂತ್ರನ್ನು ರಕ್ಷಣೆ ಮಾಡಿ ಹೊರಗೆ ತಂದಿದ್ದಾರೆ. ಬಳಿಕ ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿಯಲು ಶುರುವಾಗಿದೆ.