ನ್ಯೂಸ್ ನಾಟೌಟ್: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಸದ್ಯ ತನ್ನ ವರ್ತನೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ. ಈಕೆ ಕನ್ನಡಿಗರಿಂದ ಹಲವಾರು ಕಾರಣಗಳಿಗೆ ಟ್ರೋಲ್ ಗೆ ಒಳಗಾಗಿದ್ದಾಳೆ. ಕನ್ನಡ ಹಾಗೂ ಕನ್ನಡಿಗರನ್ನು ಅಸಡ್ಡೆ ಮಾಡಿ ಟೀಕೆಗೆ ಗುರಿಯಾಗುತ್ತಿರುವ ನಟಿ ರಶ್ಮಿಕಾ ಬಗ್ಗೆ ಜನರು ಒಂದಲ್ಲ ಒಂದು ರೀತಿಯಲ್ಲಿ ಕಾಲು ಎಳೆಯುತ್ತಲೇ ಇದ್ದಾರೆ. ಇದೀಗ ರಶ್ಮಿಕಾಳನ್ನು ಟ್ರೋಲ್ ಮಾಡುವ ಭರದಲ್ಲಿ ಆಕೆಗೆ ಮೀಸೆಯನ್ನೂ ಚಿಗುರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ಇಂಥಹದ್ದೊಂದು ಫೋಟೋ ಕಾಣಿಸಿಕೊಂಡಿರುವುದು ಉಡುಪಿಯ ಕಂಡೀರಾ ಫೇಸ್ ಬುಕ್ ಪುಟದಲ್ಲಿ. ಜನ ಯಾಕೆ ಹೀಗೆಲ್ಲ ಕಾಡ್ತಾರೋ ಗೊತ್ತಿಲ್ಲ. ಉಡುಪಿಯ ಕಟಪಾಡಿಯ ಗೋಡೆಯೊಂದರಲ್ಲಿ ಕಂಡು ಬಂದ ಜಾಹೀರಾತು ಎಂದು ಕ್ಯಾಪ್ಷನ್ ಕೊಟ್ಟು ಫೋಟೋ ಪ್ರಕಟಿಸಲಾಗಿದೆ. ಹಲವಾರು ಮಂದಿ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ತುಳುವಿನಲ್ಲಿ ಒಬ್ಬರು ಕಾಮೆಂಟ್ ಮಾಡಿ ತಾರಾಯಿ ಎಣ್ಣೆ ಪ್ರಿಯರು ಇರ್ಬೆಕು (ತೆಂಗಿನ ಎಣ್ಣೆ ಪ್ರಿಯರು ಇರಬೇಕು) ಎಂದು ರಶ್ಮಿಕಾಗೆ ಕುಟುಕಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ ರಿಷಭ್ ಶೆಟ್ಟಿ ಫ್ಯಾನ್ಸ್ ಇರಬೇಕು ಎಂದು ರಶ್ಮಿಕಾ ಕಾಲೆಳೆದಿದ್ದಾರೆ.