ನ್ಯೂಸ್ ನಾಟೌಟ್ : ತಾಲೂಕಿನಾದ್ಯಂದು ಇಂದು ಅಕಾಲಿಕ ಮಳೆಯಾಗಿದೆ. ಮಧ್ಯಾಹ್ನ 2 ಗಂಟೆಯಿಂದ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ನಗರ ಭಾಗದಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆ ಸ್ವಲ್ಪ ಮಟ್ಟಿಗೆ ತಂಪಾಗಿದೆ.
ಮೋಡ ಕವಿದ ವಾತಾವರಣ :
ಇಂದು ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಸರಿಸುಮಾರು 2 ಗಂಟೆ ವೇಳೆಗೆ ಹನಿ ಮಳೆ ಸುರಿದಿದೆ.ಸತತ ಎರಡು ಗಂಟೆಗಳ ಕಾಲ ಹನಿ ಮಳೆ ಸುರಿದಿದ್ದು,ಸದ್ದಿಲ್ಲದೇ ಬಂದ ಮಳೆಯು ಸಾರ್ವಜನಿಕರಿಗೆ ಸ್ವಲ್ಪ ಅಡಚಣೆಯನ್ನುಂಟು ಮಾಡಿತ್ತು.ಶಾಲಾ ಮಕ್ಕಳಂತು ಕೊಡೆಯಿಲ್ಲದೇ ಮನೆ ಸೇರಿದರು.ದೈನಂದಿನ ಕೆಲಸಗಳಿಗೆ ತೆರಳಿದ ಉದ್ಯೋಗಸ್ಥರು,ವ್ಯಾಪಾರಸ್ಥರು, ಕಾರ್ಮಿಕರು ಅಕಾಲಿಕ ಮಳೆಗೆ ಪರದಾಡುವಂತಾಯಿತು.ಸದ್ಯ ಮೋಡ ಕವಿದ ವಾತಾವರಣವಿದ್ದು ಇನ್ನೂ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ.ಸುಳ್ಯದ ತೊಡಿಕಾನ,ಕೊಲ್ಲಮೊಗ್ರ,ದೊಡ್ಡತೋಟ,ಕರಿಕ್ಕಳ, ಸಂಪಾಜೆ ಸೇರಿದಂತೆ,ಕೊಡಗಿನ ಚೆಂಬು ಗ್ರಾಮಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಇನ್ನು ದ.ಕ ಜಿಲ್ಲೆಯ ಹಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಹನಿ ಮಳೆಯಾಗಿರುವ ಬಗ್ಗೆವರದಿಯಾಗಿದೆ.ಕೊಡಗು, ಮೂಡಿಗೆರೆ, ಶೃಂಗೇರಿ, ಕುದುರೆಮುಖ, ತೀರ್ಥಹಳ್ಳಿ, ಆಗುಂಬೆ, ಹೊಸನಗರ, ಸಾಗರ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ ಎಂದು ತಿಳಿದು ಬಂದಿದೆ.