ನ್ಯೂಸ್ ನಾಟೌಟ್ : ರಾಜ್ಯವನ್ನು ಸಂಪೂರ್ಣ ಜೂಜುಮುಕ್ತ ಮಾಡಲು ಹರಸಾಹಸ ಕೆಲಸಗಳಾಗುತ್ತಿದೆ.ಆದರೂ ಅಲ್ಲೊ ಇಲ್ಲೋ ಜೂಜು ಅಡ್ಡೆಗಳು ನಡಿತಾನೇ ಇದೆ. ಇಲ್ಲೊಂದು ಕಡೆ ಜೂಜು ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಆದರೆ ಜೂಜು ಕೋರರು ಎಸ್ಕೇಪ್ ಆಗಿದ್ದು, ಕೋಳಿಗಳನ್ನು ಅರೆಸ್ಟ್ ಮಾಡಿದ ಘಟನೆ ನಡೆದಿದೆ.
ಘಟನೆ ನಡೆದಿದ್ದೆಲ್ಲಿ ?
ಪನ್ನಾಪುರ ಬಳಿಯ ಬಸವಣ್ಣ ಕ್ಯಾಂಪ್ನಲ್ಲಿ ಸಂಕ್ರಾತಿ ನಿಮಿತ್ತ ಕೋಳಿ ಕಾಳಗ , ಜೂಜಾಟ ನಡೆಯುತ್ತಿತ್ತು. ಈ ವೇಳೆ ದಾಳಿ ಮಾಡಿರುವ ಪೊಲೀಸರ ಕೈಗೆ ಸಿಗದೆ ಗ್ಯಾಂಬ್ಲರ್ ಗಳುಪರಾರಿಯಾಗಿದ್ದಾರೆ . ಬದಲಾಗಿ ಹುಂಜಗಳು ಸಿಕ್ಕಿದ್ದು, ಜೊತೆಗೆ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಆಕ್ರೋಶಕ್ಕೀಡಾದ ಸಾರ್ವಜನಿಕರು:
ದಾಳಿ ವೇಳೆ ಪಣಕ್ಕಿಟ್ಟಿದ್ದ ಹುಂಜಗಳನ್ನು ವಶಪಡಿಸಿಕೊಂಡು ಪೊಲೀಸರು ಸೆಲ್ನಲ್ಲಿ ಇಟ್ಟಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬದ ನೆಪದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಡೆ ನಿಷೇಧಿತ ಕೋಳಿ ಕಾಳಗ ನಡೆಸಲಾಗುತ್ತದೆ. ಕೋಳಿ ಕಾಳಗಕ್ಕೆ ಕೋಟ್ಯಂತರ ರೂಪಾಯಿ ಜೂಜು ವಹಿವಾಟು ನಡೆಯುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.