ನ್ಯೂಸ್ ನಾಟೌಟ್ : ಕಳೆದ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ಇಂದು ಶವವಾಗಿ ಪತ್ತೆಯಾದ ಘಟನೆ ಪಂಜದ ಪಂಬೆತ್ತಾಡಿ ಗ್ರಾಮದಲ್ಲಿ ನಡೆದಿದೆ.ಕೆಲಸಕ್ಕೆಂದು ಹೋದವರು ಮನೆಗೆ ಬಾರದೇ ಇದ್ದಾಗ ಎಷ್ಟೇ ಹುಡುಕಾಡುದರೂ ಅವರು ಪತ್ತೆಯಾಗಿರಲಿಲ್ಲ. ಇದೀಗ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ.
ಯಾರಿವರು? ಏನಿದು ಘಟನೆ?
ಪಂಜದ ಪಂಬೆತ್ತಾಡಿ ಗ್ರಾಮದವರು. ಹೆಸರು ಹೆರ್ಮಾಜಿ ನಾರಾಯಣ ನಾಯ್ಕ.ಜ.16 ರಂದು ಮುಂಜಾನೆ ಮನೆಯಿ೦ದ ಕೆಲಸಕ್ಕೆ೦ದು ತೆರಳಿದ್ದರು. ಬಳಿಕ ಅವರು ಮನೆಗೆ ಬಾರದಿದ್ದುದರಿಂದ ಮನೆಯವರು ಹುಟುಕಾಟ ನಡೆಸಿದ್ದಾರೆ.ಜ.19 ಕೂತ್ಕುಂದ ಗ್ರಾಮದ ಸ೦ಪ ಎ೦ಬ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ.
ಈ ವೇಳೆ ಮನೆಯವರು ಸ್ಥಳಕ್ಕೆ ಆಗಮಿಸಿ ಮೃತ ದೇಹ ಖಚಿತ ಪಡಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಸಾವಿನ ಕುರಿತು ಪೋಲೀಸ್ ತನಿಖೆ ನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ.ಮೃತರು ಪುತ್ರರಾದ ಜಯಂತ, ಪ್ರಕಾಶ್, ಗಿರೀಶ್, ಪುತ್ರಿ ಜಯಶ್ರೀ ಹಾಗೂ ಕುಟುಂಬದವರನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.