ನ್ಯೂಸ್ ನಾಟೌಟ್ : ಕಿತ್ತಳೆ ಹಣ್ಣು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ..? ಈ ಹಣ್ಣು ಪ್ರತಿಯೊಬ್ಬರಿಗೂ ಇಷ್ಟ. ಅದರ ರುಚಿಯೇ ಬೇರೆ. ಎಷ್ಟು ತಿಂದರೂ ಸಾಕು ಅನಿಸುವುದೇ ಇಲ್ಲ. ಇದು ರುಚಿಕರ ಹಣ್ಣಾಗಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಕಿತ್ತಳೆ ಹಣ್ಣಿನಿಂದ ದೂರವಿರಬೇಕು ಅನ್ನುವುದನ್ನು ತಿಳಿದುಕೊಂಡಿರಲೇಬೇಕು.
ಈ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಷಿಯಂನಂತಹ ಪೋಷಕಾಂಶಗಳು ಇದೆ. ಈ ಹಣ್ಣು ಚರ್ಮದಿಂದ ಹಿಡಿದು ಹೊಟ್ಟೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಉತ್ತಮ ಪರಿಹಾರ ನೀಡುತ್ತದೆ. ಇದು ದೇಹಕ್ಕೆ ಒಳ್ಳೆಯ ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಆದರೆ ಅತಿಯಾದ ಸೇವನೆಯಿಂದ ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಆ್ಯಸಿಡಿಟಿ ಸಮಸ್ಯೆ ಇರುವವರು ಕಿತ್ತಾಳೆ ಹಣ್ಣನ್ನು ತಿನ್ನಬಾರದು. ಆ ಸಮಸ್ಯೆಯಿಂದ ಬಳಲುತ್ತಿರುವವರು ಕಿತ್ತಳೆ ಅಥವಾ ಅದರ ರಸವನ್ನು ಸೇವಿಸಬಾರದು. ಯಾಕೆಂದರೆ ಇದು ಎದೆ ಮತ್ತು ಹೊಟ್ಟೆಯಲ್ಲಿ ಉರಿಯುವಿಕೆಯನ್ನು ಹೆಚ್ಚಿಸುತ್ತದೆ. ಹುಳುಕು ಹಲ್ಲು ಇರುವವರು ಕಿತ್ತಳೆ ಹಣ್ಣನ್ನು ತಿಂದರೆ ಹಲ್ಲುಗಳು ಹದಗೆಡುತ್ತದೆ ಮತ್ತು ಜುಮ್ಮೆನಿಸುವಿಕೆಯ ಅನುಭವವಾಗುತ್ತದೆ.
ಹೊಟ್ಟೆ ನೋವು ಅನೇಕ ಕಾರಣಗಳಿಂದ ಬರುತ್ತದೆ. ಆದರೆ ಇದ್ದಕ್ಕಿದ್ದಂತೆ ಈ ಸಮಸ್ಯೆಯನ್ನು ಎದುರಿಸಿದರೆ, ತಕ್ಷಣ ಕಿತ್ತಳೆ ತಿನ್ನುವುದನ್ನು ನಿಲ್ಲಿಸಬೇಕು. ಯಾಕೆಂದರೆ ಕಿತ್ತಳೆಯಲ್ಲಿರುವ ಆಮ್ಲವು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಜೀರ್ಣ ಸಮಸ್ಯೆ ಇರುವವರು, ಹೊಟ್ಟೆ ಸಮಸ್ಯೆ ಇರುವವರು ಕಿತ್ತಳೆ ಹಣ್ಣನ್ನು ಸೇವಿಸಬಾರದು. ಏಕೆಂದರೆ ಇದು ಅತಿಸಾರವಾಗಿದೆ. ಆದ್ದರಿಂದ ಹೊಟ್ಟೆ ಸೆಳೆತ ಮತ್ತು ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು. ಕಿತ್ತಳೆ ಹಣ್ಣನ್ನು ಪೂರ್ತಿಯಾಗಿ ತಿಂದರೆ ಅದು ದೇಹಕ್ಕೆ ನಾರಿನಂಶವನ್ನು ನೀಡುತ್ತದೆ. ಇದು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.