ನ್ಯೂಸ್ ನಾಟೌಟ್: ಕೂರ್ಗ್ ಅಂದ್ರೆ ಥಟ್ಟನೆ ನೆನಪಾಗೋದು ಇಲ್ಲಿನ ಪ್ರವಾಸಿ ಸ್ಥಳಗಳ ಜತೆಗೆ ಇಲ್ಲಿನ ಚಿಲ್ಡ್ ವೆದರ್. ತಂಪಾದ ಗಾಳಿ, ಮೈಕೊರೆಯುವ ಚಳಿ ಪ್ರವಾಸಿಗರಿಗೆ ಒಂಥರಾ ಮಜಾ ಕೊಡುತ್ತೆ. ಕೊಡಗನ್ನ ದಕ್ಷಿಣ ಕಾಶ್ಮೀರ ಎಂದೇ ಖ್ಯಾತಿ ಪಡೆದ ನಾಡಲ್ಲಿ ಹೋಮ್ ಮೇಡ್ ವೈನ್ಗೆ ಭಾರೀ ಡಿಮ್ಯಾಂಡ್ ಇದೆ. ಇಲ್ಲಿನ ಚಳಿಗೆ ವೈನ್ ಇದ್ರೆನೆ ಕೆಲಸ ನಡಿಯೋದು. ಇಲ್ಲಿಯಂತೆ ಕಿಕ್ ಕೊಡೊ ವೈನ್ ಇನ್ನೆಲ್ಲೂ ಸಿಗೋಕೆ ಚಾನ್ಸೇ ಇಲ್ಲ. ಕೊಡಗಿನ ಬಹುತೇಕರ ಜೀವನಾಧಾರ ವೈನ್ ಬ್ಯುಸಿನೆಸ್ ಅಂದ್ರೆ ತಪ್ಪಾಗಲ್ಲ. ಹಾಗಾದ್ರೆ ಇಲ್ಲಿನ ವೈನ್ ನಲ್ಲಿ ಅದೇನ್ ಸ್ಪೆಷಾಲಿಟಿ ಇದೆ ಅನ್ನೋದನ್ನ ತಿಳಿಯೋಣ ಬನ್ನಿ..
ಪ್ರವಾಸಿಗರು ಫಿದಾ:
ಕೊಡಗಿನಲ್ಲಿ ಕಣ್ಣಿಗೆ ಮುದ ನೀಡುವ ಅನೇಕ ಪ್ರವಾಸಿ ಸ್ಥಳಗಳಿವೆ.ಇಲ್ಲಿನ ಚಳಿಯ ವಾತಾವರಣಕ್ಕೆ ಪ್ರವಾಸಿಗರು ಫಿದಾ ಆಗುತ್ತಾರೆ.ಎಂತಹ ಸೆಕೆ ಟೈಂನಲ್ಲೂ ಇಲ್ಲಿ ಮಾತ್ರ ವಾತಾವರಣ ಕೂಲ್ ಆಗಿರುತ್ತೆ.ಕೊಡಗಿಗೆ ಆಗಮಿಸುವ ಟೂರಿಸ್ಟ್ ಇಲ್ಲಿನ ಬ್ಯೂಟಿಫುಲ್ ನೇಚರ್ ಕಣ್ತುಂಬಿಕೊಳ್ಳೋದು ಅಷ್ಟೇ ಅಲ್ಲ, ಹೋಮ್ ಮೇಡ್ ವೈನ್ನತ್ತಲೂ ಅಟ್ರಾಕ್ಟ್ ಆಗ್ತಾರೆ. ಕೊಡಗಿನ ವೈನ್ ಟೇಸ್ಟ್ ಇನ್ನೆಲ್ಲೂ ಸಿಗಲ್ಲ. ಅಷ್ಟೊಂದು ಡಿಫ್ರೆಂಟ್ ಆಗಿ, ಪ್ಯೂರ್ ಆಗಿರುತ್ತೆ ಕೂರ್ಗ್ ಹೋಮ್ ಮೇಡ್ ವೈನ್.ಗುಲಾಬಿ ಹೂವು, ಗಾಂಧಾರಿ ಮೆಣಸು, ವಿವಿಧ ಬಗೆಯ ಹಣ್ಣುಗಳು, ವೀಳ್ಯದೆಲೆ, ಶುಂಠಿ, ಭತ್ತ ಹೀಗೆ ಕೊಡಗಿನಲ್ಲೇ ಬೆಳೆದ ಉತ್ಪನ್ನಗಳಿಂದ ವೈನ್ ತಯಾರಿಸಲಾಗುತ್ತೆ. ಸುಮಾರು 200 ರಿಂದ 600 ರೂಪಾಯಿವರೆಗೆ ಈ ಉತ್ಪನ್ನ ಮಾರಾಟವಾಗುತ್ತೆ ಅಂದರೆ ನೀವು ನಂಬಲೇಬೇಕು.
ಶುದ್ದ ಹೋಮ್ ಮೇಡ್ ವೈನ್:
ಕೊಡಗಿನ ಬಹುತೇಕರು ಇಂದಿಗೂ ಸ್ವ ಉದ್ಯೋಗದ ಮೂಲಕ ಹೋಂ ಮೇಡ್ ವೈನ್ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದಾಯ ಗಳಿಸುತ್ತಿದ್ದಾರೆ. ಸ್ಪೈಸಸ್ ಅಂಗಡಿಗಳಲ್ಲಿ ಕೂರ್ಗ್ ಹೋಂ ಮೇಡ್ ವೈನ್ ಮಾರಾಟ ಮಾಡಲಾಗುತ್ತದೆ.ಕೊಡಗಿನ ವೈನ್ಗೆ ಉತ್ತಮ ಬೇಡಿಕೆಯಿದ್ದು, ಪ್ರವಾಸಿಗರು ಹೆಚ್ಚು ಕೊಂಡುಕೊಳ್ಳುತ್ತಾರೆ. ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ ವಿವಿಧ ಬಗೆಯ ಹಣ್ಣಿನಿಂದ ನೈಸರ್ಗಿಕವಾಗಿ ಹೋಂ ಮೇಡ್ ವೈನ್ ತಯಾರಿಸಲಾಗುತ್ತದೆ. ಸುಮಾರು ಒಂದು ತಿಂಗಳ ಪ್ರಾಸೆಸ್ ಬಳಿಕ ಕೊಡಗಿನ ಶುದ್ದ ಹೋಮ್ ಮೇಡ್ ವೈನ್ ತಯಾರಾಗುತ್ತೆ.
ಬಹುತೇಕರ ಉದ್ಯೋಗ:
ಆಹಾರ ಇಲಾಖೆಯಿಂದ ಪರವಾನಗಿ ಪಡೆದುಕೊಂಡು ಜಿಲ್ಲೆಯಲ್ಲಿ ವೈನ್ ಉದ್ಯಮವನ್ನು ನಡೆಸಲಾಗುತ್ತದೆ. ವೈನ್ ಕೂಡ ಮದ್ಯದ ಸಾಲಿಗೆ ಸೇರೋದ್ರಿಂದ ಕೊರೊನಾ ಲಾಕ್ ಡೌನ್ ಸಂದರ್ಭ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆ ವೇಳೆ ಹಲವರು ವೈನ್ ತಯಾರಿಕೆಯನ್ನೇ ನಿಲ್ಲಿಸಿ ಬಿಟ್ಟಿದ್ರೆ, ಬಹುತೇಕರು ಸಿಕ್ಕಿದ್ದೇ ಚಾನ್ಸ್ ಎಂಬಂತೆ ದುಪ್ಪಟ್ಟು ಬೆಲೆಗೆ ವೈನ್ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸಿಕೊಂಡಿದ್ರು.ಹೀಗೆ ಈ ಕಾಫಿನಾಡಲ್ಲಿ ಬಹುತೇಕರಿಗೆ ಇದು ಉದ್ಯೋಗವಾಗಿ ಪರಿಣಮಿಸಿದೆ.