ನ್ಯೂಸ್ ನಾಟೌಟ್ : ಸೆಲ್ಫಿ ಕ್ರೇಜ್ ಗೆ ಸಾಕಷ್ಟು ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿರುವ ಬಗ್ಗೆ ವರದಿಯನ್ನು ನೀವೆಲ್ಲಾ ಓದಿದ್ದೀರಿ.ಇಲ್ಲೊಬ್ಬರು ಕೋತಿಯೊಂದಿಗೆ ಕೋತಿಯಾಟ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ.
ಹೌದು,ಜೀವಕ್ಕಿಂತಲೂ ಸೆಲ್ಫಿಯೇ ಮುಖ್ಯವೆಂದು ಹುಚ್ಚಾಟ ಮಾಡಿ ಅವಾಂತರನ್ನು ತಂದೊಡ್ಡಿಕೊಳ್ಳುವವರ ಸಾಲಿಗೆ ಈ ವ್ಯಕ್ತಿಯು ಸೇರಿಕೊಳ್ಳುತ್ತಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಜೀವವನ್ನೇ ಕಳೆದುಕೊಂಡಿದ್ದಾರೆ. ದಾರಿ ಮಧ್ಯದಲ್ಲಿ ಪ್ರಾಣಿಗಳನ್ನು ಕಂಡಾಗ ನೋಡಿ ಸಂತಸ ಪಡಬೇಕು. ಅಥವಾ ದೂರದಿಂದಲೇ ಫೋಟೋ ತೆಗೆದು ಸುಮ್ಮನಾಗಬೇಕು. ಆದರೆ ಇವರು ಮಾಡಿದ್ದು ಮಾತ್ರ ಎಡವಟ್ಟಿನ ಕೆಲಸ.ಸೆಲ್ಫಿಗೆ ಗೀಳಿಗೆ ಪ್ರಪಾತಕ್ಕೆ ಬಿದ್ದಿದ್ದಾರೆ.
ಪುಣೆಯ ವರಂಧಾ ಘಾಟ್ನಲ್ಲಿ ಸಾಗುತ್ತಿರುವಾಗ ಕೋತಿ ಕಣ್ಣಿಗೆ ಕಾಣಿಸಿತು. ಅದರೊಡನೆ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ.ಅಬ್ದುಲ್ ಶೈಕ್ (39) ಎಂಬಾತನಿಗೆ ಘಾಟಿ ರಸ್ತೆಯಲ್ಲಿ ಸಂಚರಿಸುವಾಗ ಕೋತಿ ಕಾಣಸಿಕ್ಕಿದ್ದು. ಈ ವೇಳೆ ಕಾರು ನಿಲ್ಲಿಸಿ, ಮಂಗನೊಂದಿಗೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಘಾಟಿ ರಸ್ತೆಯ ಒಂದು ಬದಿ ಸಹಜವಾಗಿಯೇ ಪ್ರಪಾತ ಇರುತ್ತದೆ. ಇದನ್ನು ಅರಿತುಕೊಳ್ಳದ ಅಬ್ದುಲ್ ಶೈಕ್ ಸೆಲ್ಫಿ
ತೆಗೆಯಲು ದುಸ್ಸಾಹ ಮಾಡಿಕೊಂಡಿದ್ದಾರೆ. ಪರಿಣಾಮ 500 ಅಡಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ಅಬ್ದುಲ್ ಶೈಕ್ ಕೋತಿಗಳ ಗುಂಪು ಕಾಣಿಸುತ್ತಿದ್ದಂತೆ ಅದಕ್ಕೆ ಆಹಾರದ ಪೊಟ್ಟಣವನ್ನು ನೀಡಿದ್ದಾರೆ. ನಂತರ ಅದರೊಂದಿಗೆ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ವ್ಯಾಪಾರಸ್ಥರು ಹೇಳಿಕೊಂಡಿದ್ದಾರೆ. ಈ ಮಾಹಿತಿ ಬಂದೊಡನೆ, ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಪತ್ತೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಭೋರ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ವಿಠಲ್ ದಾಬಾಧೆ ಹೇಳಿದ್ದಾರೆ.ಮೃತ ಅಬ್ದುಲ್ ಶೈಕ್ ಘಟನಾ ಸ್ಥಳದಿಂದ 36ಕಿ.ಮೀ ದೂರದಲ್ಲಿರುವ ನರ್ಸಾಪುರ ಗ್ರಾಮದ ನಿವಾಸಿ. ವೃತ್ತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಇವರ ಪತ್ನಿಯೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.