ನ್ಯೂಸ್ ನಾಟೌಟ್: ಕೊಡಗಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಹುಲಿ ದಾಳಿಯ ಬಗೆಗಿನ ವರದಿ ಪ್ರಕಟಗೊಳ್ಳುತ್ತಿದ್ದವು. ಇದೀಗ ಕೊಡಗಿನ ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಮಾಲ್ದಾರೆ ಗ್ರಾಮದ ಅವರೆಗುಂದದಲ್ಲಿ ನಿತ್ರಾಣಗೊಂಡಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.
ಸದ್ಯ ಸೆರೆಯಾದ ಹುಲಿಯನ್ನು ಮೈಸೂರು ಸಮೀಪದ ಕೂರ್ಗಳ್ಳಿಗೆ ಸ್ಥಳಾಂತರಿಸಲಾಗಿದೆ. ಹನ್ನೆರಡು ವರ್ಷದ ಹುಲಿ ಕಳೆದ ಕೆಲವು ದಿನಗಳ ಹಿಂದೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹುಲಿಯ ಮೇಲೆ ನಿಗಾ ಇರಿಸಲಾಗಿತ್ತು. ಅಂತಿಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ಮೂಲಕ ಅರೆವಳಿಕೆ ಔಷಧಿ ನೀಡಿ ಬಂಧಿಸಿದರು. ಇದಕ್ಕೂ ಮೊದಲೇ ಹುಲಿ ಸರಿಯಾಗಿ ಆಹಾರ ತಿನ್ನದೇ ಇರುವುದರಿಂದ ನಿತ್ರಾಣಗೊಂಡಿತ್ತು. ವೈದ್ಯಾಧಿಕಾರಿಗಳಾದ ಡಾ| ಚೆಟ್ಟಿಯಪ್ಪ ಹಾಗೂ ಡಾ | ರಮೇಶ್ ಚಿಕಿತ್ಸೆ ನೀಡಿದರು. ನಂತರ ಹುಲಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು.