ನ್ಯೂಸ್ ನಾಟೌಟ್: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಮೂವರಲ್ಲಿ ಕೋವಿಡ್ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.ಆದರೆ ಅಷ್ಟೊಂದು ಆತಂಕ ಪಡುವ ಅಗತ್ಯವಿಲ್ಲ, ಅವರೆಲ್ಲರೂ ಲಘು ಶೀತದಿಂದ ಬಳಲು ತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರ ಗಂಟಲು ದ್ರವದ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್ ಲಕ್ಷಣವಿದ್ದಲ್ಲಿ ಪರೀಕ್ಷೆ:
ಇತ್ತೀಚೆಗೆ ಕಳೆದ ಕೆಲವು ದಿನಗಳಿಂದ 3 ಸಾವಿರ ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಬಹು ತೇಕ ಮಂದಿಯಲ್ಲಿ ಜ್ವರ, ಶೀತದ ಲಕ್ಷಣಗಳಿದ್ದವು. ಆದರೆ, ಕೋವಿಡ್ ಪತ್ತೆಯಾಗಿದ್ದು ಮೂವರಲ್ಲಿ ಮಾತ್ರ.ಕ್ರಿಸ್ಮಸ್ ಹಾಗೂ ವರ್ಷಾಂತ್ಯದಲ್ಲಿ ಕೊಡಗು ಜಿಲ್ಲೆಗೆ ಅಸಂಖ್ಯಾತ ಜನರು ಬಂದಿರುವ ಹಿನ್ನಲೆ ಸುಮಾರು 2 ಲಕ್ಷದಷ್ಟು ಜನರು ಇಲ್ಲಿನ ವಿವಿಧ ಹೋಟೆಲ್ಗಳು, ಹೋಂಸ್ಟೇಗಳು, ರೆಸಾರ್ಟ್ಗಳಲ್ಲಿ ತಂಗಿದ್ದರು. ಇವರಲ್ಲಿ ಬಹಳಷ್ಟು ಮಂದಿ ಉತ್ತರ ಭಾರತದಿಂದ ಬಂದವರೇ ಇದ್ದರು. ಹೀಗಾಗಿ, ಕೋವಿಡ್ ವ್ಯಾಪಕವಾಗಿ ಹರಡುವ ಸಾಧ್ಯತೆಗಳಿವೆ ಎಂಬ ಆತಂಕ ಮನೆ ಮಾಡಿತ್ತು.ಆರೋಗ್ಯ ಇಲಾಖೆ ನಡೆಸುತ್ತಿದ್ದ ಕೋವಿಡ್ ಪರೀಕ್ಷೆ ಹೆಚ್ಚಿಸಿತು. ನಿತ್ಯ ನಡೆಸುತ್ತಿದ್ದ ಪರೀಕ್ಷೆಯನ್ನು ದುಪ್ಪಟ್ಟುಗೊಳಿಸಿತು. ಕೋವಿಡ್ ಲಕ್ಷಣಗಳು ಕಂಡು ಬಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು.