ನ್ಯೂಸ್ ನಾಟೌಟ್ : ದೇಶದ ಜನರು ಮೆಚ್ಚಿ ಅಪ್ಪಿದ ಸಿನಿಮಾ ಕಾಂತಾರ. ಬಿಡುಗಡೆಯಾದ ದಿನದಿಂದ ಕಾಂತಾರ ಸಿನಿಮಾ ನಾಗಾಲೋಟದಲ್ಲಿದೆ. ಕೋಟ್ಯಂತರ ರೂ. ಹಣವನ್ನು ಬಾಚಿಕೊಂಡು ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಇಂತಹ ಸಿನಿಮಾವನ್ನು ಯುವಕನೋರ್ವ ಅವಮಾನಿಸಿ ರಕ್ತಕಾರಿ ಸತ್ತಿದ್ದಾನೆ ಅನ್ನುವ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂತಾರ ಸಿನಿಮಾದ ನಟ ಕಿಶೋರ್ ಎಡವಟ್ಟು ಮಾಡಿಕೊಂಡಿದ್ದಾರೆ. ಇವರ ಒಂದು ಮಾತಿಗೆ ಅವರ ಟ್ವಿಟ್ಟರ್ ಖಾತೆಯೇ ಬ್ಯಾನ್ ಆಗಿದೆ. ಟ್ವಿಟ್ಟರ್ ನಿಯಮಾವಳಿಯನ್ನು ಉಲ್ಲಂಘಿಸಿದ್ದೇ ಖಾತೆ ಬ್ಯಾನ್ ಆಗುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಕಾಂತಾರ’ ಚಿತ್ರದಲ್ಲಿ ಕಾಡುಬೆಟ್ಟು ಶಿವ ಮತ್ತು ಫಾರೆಸ್ಟ್ ಆಫೀಸರ್ ಮುರಳಿ ಸಂಭಾಷಣೆ ಜನರಿಗೆ ಸಾಕಷ್ಟು ಕಿಕ್ ನೀಡಿತ್ತು. ಈ ಸಿನಿಮಾ ಕಿಶೋರ್ಗೆ ಕೂಡ ಹೊಸ ಇಮೇಜ್ ನೀಡಿತ್ತು. ಈ ನಡುವೆ ಕಿಶೋರ್ ತಮ್ಮ ಅನಿಸಿಕೆಗಳನ್ನು ಹೇಳಲು ಹೋಗಿ ಖಾತೆ ಡಿಲಿಟ್ ಆಗುವುದಕ್ಕೆ ಕಾರಣವಾಗಿದ್ದಾರೆ.
” ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕಥೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ. ಸಿನಿಮಾವಾಗಲಿ ಪುರಾಣವಾಗಲಿ.”
ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ.” ಎಂದು ಕಿಶೋರ್ ಬರೆದುಕೊಂಡಿದ್ದಾರೆ.
https://www.instagram.com/p/Cm4WYdEvMtC/?utm_source=ig_web_copy_link
ಹೀಗೆ ಬರೆದ ಕೆಲವೇ ಗಂಟೆಗಳಲ್ಲಿ ಕಿಶೋರ್ ಟ್ಟಿಟರ್ ಖಾತೆ ಡಿಲಿಟ್ ಆಗಿದೆ. ಟ್ಟಿಟ್ಟರ್ ನಿಯಮ ಉಲ್ಲಂಘನೆ ಮಾಡಿದ ಕಾರಣ ಖಾತೆ ರದ್ದು ಮಾಡಲಾಗಿದೆ ಎಂದು ಟ್ಟಿಟ್ಟರ್ ಹೇಳಿಕೊಂಡಿದೆ. ಸದ್ಯ ಇವರು ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚುತ್ತಿದ್ದಾರೆ.